ಉಪ್ಪಳ: ಅಂತಾರಾಷ್ಟ್ರೀಯ ಯೋಗ ದಿನವನ್ನು ಪೈವಳಿಕೆ ಕಾಯರ್‍ಕಟ್ಟೆ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಶಾಲಾ ಹಿರಿಯ ಶಿಕ್ಷಕಿ ಬಿ.ಉಷಾ ಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕ್ರೀಡಾ ಅಧ್ಯಾಪಕ ಮಹೇಶ ಕೆ. ಮತ್ತು ಧರ್ಮೇಂದ್ರ ಮಾಸ್ತರ್ ಯೋಗ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಅಧ್ಯಾಪಕಿ ವಿಜಯಲಕ್ಷ್ಮಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಒಂದು ಗಂಟೆಗಳ ಕಾಲ ಯೋಗ ಪ್ರದರ್ಶನ ನಡೆಯಿತು.


