HEALTH TIPS

ಪುಲ್ಲಾಂಜಿಯ ಬೆಡಗಿನ ಬಾಲ ನಟನಿಗೆ ಪ್ರಶಂಸೆಯ ಮಹಾಪೂರ!-ಪುಟಾಣಿಯನ್ನು ಸನ್ಮಾನಿಸಿದ ಉಪಸಭಾಪತಿಗಳು

     
        ಬದಿಯಡ್ಕ:ಯಾವ ಶಿಲೆಯಲ್ಲಿ ಯಾವ ಶಿಲ್ಪ ಅಡಗಿದೆ ಎಂದು ಕಂಡುಹಿಡಿಯುವುದು ಅಸಾಧ್ಯವೋ ಹಾಗೆಯೇ ಮಕ್ಕಳಲ್ಲಿ ಅಡಕವಾಗಿರುವ ಅಪ್ರತಿಮ ಪ್ರತಿಭೆಯನ್ನು ಕೆಲವು ಅನಿರೀಕ್ಷಿತ  ಅವಕಾಶಗಳು  ಬೆಳಕಿಗೆ ತರುವಲ್ಲಿ ಯಶಸ್ವಿಯಾಗುತ್ತದೆ. ಈ ಬಾಲಕ ಅದಕ್ಕೊಂದು ಉದಾಹರಣೆ. ಕಿರು ಚಿತ್ರಕ್ಕೆ ಕಲಶಪ್ರಾಯವಿಟ್ಟಂತೆ ನಟನೆ ಕಲಿಯುವ ಮೊದಲೇ ತಾನು ಅನುಭವಿಸುವ ಬಡತನದ ಬೇಗೆಯನ್ನು ಸಹಜವಾಗಿ ಜೀವಿಸಿತೋರಿಸುವ ಮೂಲಕ ವಿಜಯ ಎಲ್ಲರಲ್ಲೂ ಬೆರಗುಮೂಡಿಸಿದ್ದಾನೆ. ಈ ಪ್ರತಿಭೆಯನ್ನು ಕೈಹಿಡಿದು ಮುನ್ನಡೆಸುವ ಮೂಲಕಓರ್ವ ಅಸಾಮಾನ್ಯ ನಟನನ್ನು ಗಡಿನಾಡಿಗೆ ನೀಡಲು ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್ತು ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಸಂತಸ ವ್ಯಕ್ತಪಡಿಸಿದರು.
          ಅವರು 40 ಪುರಸ್ಕಾರಗಳನ್ನು ಪಡೆದ ಪುಲ್ಲಾಂಜಿ ಎಂಬ ಕಿರುಚಿತ್ರದಲ್ಲಿ ಅಮೋಘ ಅಭಿನಯ ನೀಡಿ ಜನಮನ ಸೆಳೆದ ಪೆರಡಾಲ ಕೊರಗ ಕೊಲನಿಯ ಪುಟ್ಟ ಬಾಲಕ ವಿಜಯನನ್ನು ಶನಿವಾರ ಶಾಲು ಹೊದಿಸಿ, ಸ್ಮರಣಿಕೆ ಮತ್ತು ಸಮ್ಮಾನ ಪತ್ರ ನೀಡಿ ಸನ್ಮಾನಿಸಿ ಮಾತನಾಡುತ್ತಿದ್ದರು.
        ಬದಿಯಡ್ಕ ಗುರುಸದನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಆಶ್ರಯದಲ್ಲಿ ಕೇಳು ಮಾಸ್ಟರ್ ಸ್ಮರಣಾರ್ಥ ಕನ್ನಡ ಶಾಳೆಗಳಿಗೆ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು. ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ದ.ಕ.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಉಪಾಧ್ಯಕ್ಷ ಪ್ರೊ.ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಬಾಲಕೃಷ್ಣ ಅಚ್ಚಾಯಿ, ರವಿ ನಾಯ್ಕಾಪು, ಪುರುಷೋತ್ತಮ ಭಟ್ ಪೈವಳಿಕೆ, ನಿತಿನ್, ನವೀನ್, ಸಂಧ್ಯಾಗೀತಾ ಬಾಯಾರು, ರೇಶ್ಮಾಸುನಿಲ್. ಜಯಲಕ್ಷ್ಮಿ, ವಿದ್ಯಾಗಣೇಶ್ ಅಣಂಗೂರು ಮುಂತಾದವರು ಉಪಸ್ಥಿತರಿದ್ದರು.
      ವಿಜಯ ಪುಲ್ಲಾಂಜಿಯಲ್ಲಿ ಹಸಿವಿನಿಂದ ನರಳುವ ಬಡಹುಡುಗನ ಪಾತ್ರವನ್ನು ಈತ ನಿರ್ವಹಿಸಿದ್ದು ಮನೋಜ್ಞವಾದ ಅಭಿನಂiÀiದ ಮೂಲಕ ನೋಡುಗರ ಕಂಗಳಲ್ಲಿ ಹನಿ ಮೂಡುವಂತೆ ಮಾಡಿದ್ದು ಕೊರಗ ಕೊಲನಿಯ ಬಾಲಕನ ಪ್ರತಿಭೆ ಎಲ್ಲರನ್ನು ಬೆರಗು ಮೂಡಿಸಿದೆ.
        ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಗಳಾದ ಚಿತ್ತರಂಜನ್ ಕಡಂದೇಲು, ಉಪಾಸನ ಪಂಜರಿಕೆ, ಸಮನ್ವಿತಾಗಣೇಶ್ ಮತ್ತು ವಸಂತ ಇವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries