ಮುಳ್ಳೇರಿಯ: ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಯೋಗ ದಿನಾಚರಣೆ ಜರುಗಿತು.
ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಅಧ್ಯಕ್ಷತೆ ವಹಿಸಿದ್ದರು.ಬೆಳ್ಳೂರು ಆಯರ್ವೇದ ಆರೋಗ್ಯ ಕೇಂದ್ರದ ವೈದ್ಯ ಡಾ.ಹಜೀಶ್ ಯೋಗದ ಮಹತ್ವ ವಿವರಿಸಿದರು.
ಮಾತೃ ಮಂಡಳಿ ಅಧ್ಯಕ್ಷೆ ಶಾಂತಾ, ಹಿರಿಯ ಶಿಕ್ಷಕ ಕುಂಞÂರಾಮ ಮಣಿಯಾಣಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಮೋಹನನ್ ಶುಭ ಹಾರೈಸಿದರು. ಶಿಕ್ಷಕಿಯರಾದ ಜಲಜಾಕ್ಷಿ, ಗೀತಾಂಜಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಯೋಗ ಪ್ರದರ್ಶನ ನಡೆಯಿತು.ಶಿಕ್ಷಕರಾದ ಸದಾಶಿವ ಶರ್ಮ, ಸ್ಮಿತಾ ಭಾಸ್ಕರನ್ ನೇತೃತ್ವ ವಹಿಸಿದರು.


