HEALTH TIPS

ಓದುವ ಪಕ್ಷಾಚರಣೆ ಅಂಗವಾಗಿ ಕನ್ನಡ ಉಪನ್ಯಾಸ- ಸಮಾಜ ಒಟ್ಟುಗೂಡಿಸುವಲ್ಲಿ ಓದಿನ ಮೂಲಕದ ಬೆಳವಣಿಗೆ ಅನಿವಾರ್ಯ: ಉಮೇಶ್ ಎಂ.ಸಾಲ್ಯಾನ್


         ಕಾಸರಗೋಡು: ಸಮಾಜ ಒಟ್ಟುಗೂಡಿಸುವಲ್ಲಿ ಓದುವ ಮೂಲಕದ ಬೆಳವಣಿಗೆ ಅನಿವಾರ್ಯ ಎಂದು ರಂಗಕರ್ಮಿ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಭಿಪ್ರಾಯಪಟ್ಟರು.
     ವಾಚನ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಸ್ನಾತಕೋತ್ತರ ಸಂಶೋಧನೆ ವಿಭಾಗ ಜಂಟಿ ವತಿಯಿಂದ ಮಂಗಳವಾರ ಸರಕಾರಿ ಕಾಲೇಜಿನ ಕನ್ನಡ ವಿಭಾಗ ಸಭಾಂಗಣದಲ್ಲಿ ಜರುಗಿದ"ಓದುವಿಕೆಯ ಮಹತ್ವ" ಎಂಬ ವಿಷಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
     ಸ್ಥಳೀಯ ಮಟ್ಟದ ಸಾಹಿತಿಗಳ ರಚನೆಗಳನ್ನೂ ಓದುವ ಮೂಲಕ ನಾಡಿನ ಧ್ವನಿಯನ್ನು ಅರ್ಥೈಸಿಕೊಳ್ಳಬೇಕು. ರಾಜ್ಯ ಗ್ರಂಥಾಲಯ ಮಂಡಳಿ ಸಂಸ್ಥಾಪಕ ಪಿ.ಎನ್.ಪಣಿಕ್ಕರ್ ಅವರನ್ನು ಸಂಸ್ಮರಿಸಿದ ಅವರು ಓದುವ ಅವಕಾಶ ಇಲ್ಲದ ಸ್ಥಿತಿಯನ್ನು ಕಂಡ ಪಿ.ಎನ್.ಪಣಿಕ್ಕರ್ ಅವರು ರಾಜ್ಯಾದ್ಯಂತ ಗ್ರಂಥಾಲಯಗಳನ್ನು ಸ್ಥಾಪಿಸಿ ಓದುವ ಕ್ರಾಂತಿಗೆ ನಾಂದಿ ಹಾಡಿದರು ಎಂದು ತಿಳಿಸಿದರು. 
    ಓದಿನ ಮೂಲಕ ಲಭಿಸುವ ಪ್ರಜ್ಞೆ ಬೇರೆ ಮಾಧ್ಯಮಗಳಿಂದ ದೊರೆಯದು. ಈ ಮಹತ್ವವನ್ನು ತಿಳಿದಿಕೊಂಡ ಹಿನ್ನೆಲೆಯಲ್ಲೇ ಅನೇಕ ಕೃತಿಗಳು ಇಂದು ಅಂತರ್ಜಾಲದ ಮೂಲಕವೂ ಲಭ್ಯವಿವೆ. ಓದಿನ ಮೂಲಕ ಮಾನವ ಸಂಬಂಧ ಸಾಧ್ಯ ಎಂಬುದನ್ನು ಹಿರಿಯ ಚೇತನ ಗಳಾದ ಕವಿ ಕಯ್ಯಾರ ಮತ್ತು ನಿರಂಜನ ಅವರ ಒಡನಾಟ ಸಾಕ್ಷಿ ಎಂದರು.
       ವಿಶೇಷ ಉಪನ್ಯಾಸ ನಡೆಸಿದ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ಮಾತನಾಡಿ, ಇಂದಿನ ಕಾಲದಲ್ಲಿ ವಿ ಜ್ಞಾ ನ-ತಂತ್ರ ಜ್ಞಾ ನ ಮನುಷ್ಯನ ಏಕಾಂತ ಕಸಿದಿವೆ. ಉಪಯುಕ್ತತೆಯಷ್ಟೇ ಅದು ಅಪಾಯವನ್ನೂ ತಂದಿಡುತ್ತಿದೆ. ಪುರಾಣ-ವೇದ-ಉಪನಿಷತ್ತುಗಳಲ್ಲಿ ಈ ಬಗ್ಗೆ ಎಚ್ಚರಿಸಲಾಗಿದೆ ಎಂದು ವಿಶ್ಲೇಷಿಸಿದರು.
      ಜೀವನ ರಚಿಸುವ ವಿಧಾನ ಓದಿನಲ್ಲಿದೆ. ರಚನೆಗಳು ಆತ್ಮಿಯವಾದಾಗ ಓದುರನ್ನು ತಲ್ಲೀನಗೊಳಿಸುತ್ತದೆ. ಓದಿ ಕೆಟ್ಟವರಿಲ್ಲ. ವೈಚಾರಿಕ ನೆಲೆಗಟ್ಟಿನಲ್ಲಿ ಚೈತನ್ಯ ಅರಳುತ್ತದೆ ಎಂದವರು ವಿವರಿಸಿದರು.
       ದೇಶದಲ್ಲಿ ಓದುವ ಇತಿಹಾಸವನ್ನು ತೆರೆದಿಟ್ಟ ಅವರು ಭಾರತದ ಗ್ರಂಥಾಲಯ ವ್ಯವಸ್ಥೆಯನ್ನು ವೈ?ಆನಿಕವಾಗಿ, ಅರ್ಥಪೂರ್ಣವಾಗಿ ರಚಿಸಿದವರು ಎಸ್.ಆರ್.ರಂಗನಾಥನ್ ಅವರು. 1817ರಲ್ಲಿ ಅವರು ಮಂಗಳೂರು ಸರಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು. ಗ್ರಂಥಗಳ ಜೋಡಣೆ ಮತ್ತು ವಿತರಣೆ ರಂಗದಲ್ಲಿ ಅವರು ಹೊಸಕ್ರಾಂತಿ ಸೃಷ್ಟಿಸಿದರು. ಅವರ ಸೇವೆಗೆ ಪದ್ಮಶ್ರೀ ಸಹಿತ ಪುರಸ್ಕಾರಗಳು ಸಂದಿವೆ. ರಾಜ್ಯದಲ್ಲಿ ಪಿ.ಎನ್.ಪಣಿಕ್ಕರ್ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಜನತೆಗೆ ಓದಿನ ಅವಶ್ಯಕತೆ ಅರ್ಥಮಾಡಿಕೊಂಡು ಗ್ರಂಥಾಲಯಗಳನ್ನು ಸ್ಥಾಪಿಸಿದರು. ಆರಂಭದಲ್ಲಿ 47 ಗ್ರಂಥಾಲಯಗಳನ್ನು ಅವರು ಸ್ಥಾಪಿಸಿದ್ದು, ಇಂದದು 6 ಸಾವಿರವಾಗಿ ಬೆಳೆದಿದೆ ಎಂದರು.
     ಬ್ಯಾಂಕ್ ಪ್ರಬಂಧಕರಾಗಿದ್ದ ಎ.ಎನ್.ಹೆಬ್ಬಾರ್ ಅವರ "ನನ್ನಿರವು ನನ್ನರಿವಿಗೆ ಬರಲಿ..." ಎಂಬ ಕವನ ವಾಚಿಸುವ ಮೂಲಕ ರಾಧಾಕೃಷ್ಣ ಉಳಿಯತ್ತಡ್ಕ ಅವರು ಯಾಂತ್ರಿಕ ಬದುಕಿನಲ್ಲಿ ನಲುಗಿದ ವ್ಯಕ್ತಿಯೊಬ್ಬರ ಜೀವನವನ್ನು ಓದು ಬದಲಿಸಿದ ಕ್ರಮವನ್ನು ತಿಳಿಸಿದರು.
     ಜಿಲ್ಲಾ ಕನ್ನಡ ಮಾಹಿತಿ ಸಹಾಯಕ ವೀಜಿ ಕಾಸರಗೋಡು ಅವರು ಮಾತನಾಡಿ ಓದು ಎಂಬುದು ಅಕ್ಷರಗಳಲ್ಲಿ ಕಣ್ಣು ನೆಡುವ ಪ್ರಕ್ರಿಯೆ ಎಂಬ ಸೀಮಿತಾರ್ಥಕ್ಕೆ ಉಳಿದುಕೊಂಡದ್ದಲ್ಲ. ಓದು ಎಂಬುದು ಅನುಭವ. ಮನಸ್ಸನ್ನು ಓದುವುದು, ಕಂಗಳನ್ನು ಓದುವುದು, ಹೃದಯವನ್ನು ಓದುವುದು, ನಾಡನ್ನು ಓದುವುದು ಇತ್ಯಾದಿ ಮಾತುಗಳುಪ್ರಚಲಿತಕ್ಕೆ ಬಂದುದು ಈ ಕಾರಣಕ್ಕಾಗಿ. ನಮ್ಮ ಹಿರಿಯರು ಶಿಕ್ಷಣಾಲಯಗಳಲ್ಲಿ ಕಲಿಕೆ ನಡೆಸಿದ್ದು ಕಡಿಮೆಯಾದರೂ, ಮನುಷ್ಯನನ್ನು, ಪ್ರಕೃತಿಯನ್ನು ಓದಿದವರು. ಹಾಗಾಗಿಯೇ ಸೌಹಾರ್ಧಯುವ ಬಾಳುವೆ ನಡೆಸಿ, ಗೆದ್ದರು. ನಾನು ಬದುಕನ್ನು ಓದಬೇಕು. ಬಾಳು ಎಂಬ ವಿಶ್ವವಿದ್ಯಾಲಯದಲ್ಲಿ ಕಲಿಕೆ ನಡೆಸಬೇಕಾದುದು ಹೇರಳವಾಗಿದೆ ಎಂದರು. 
      ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ., ಕಣ್ಣೂರು ವಿವಿ ಸೆನೆಟ್ ಸದಸ್ಯ ವಿಜಯನ್ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದೆ ಶ್ರದ್ಧಾ ನಾಯರ್ ಪಳ್ಳ ಗಾಯನ ಆಲಾಪಿಸಿದರು.
       ಉಪನ್ಯಾಸಕ ಡಾ.ಬಾಲಕೃಷ್ಣ ಹೊಸಂಗಡಿ ಸ್ವಾಗತಿಸಿದರು. ಕಾಲೇಜಿನ ಯಕ್ಷಗಾನ ಸಂಶೋಧನೆ ಕೇಂದ್ರ ಸಂಚಾಲಕ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries