ಕುಂಬಳೆ: ರಕ್ಷಕ ಶಿಕ್ಷಕ ಸಂಘದ ನಾಯಕತ್ವವನ್ನು ವಹಿಸಿಕೊಂಡು ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ನಿರಂತರ ಕಾರ್ಯಪ್ರವೃತ್ತರಾಗಿರುವ ಮುಹಮ್ಮದ್ ಬಿ.ಎ. ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯ 2019-20ನೇ ಶೈಕ್ಷಣಿಕ ವರ್ಷದ ಅಧ್ಯಕ್ಷರಾಗಿ ಮತ್ತೆ ಅವಿರೋಧವಾಗಿ ಆಯ್ಕೆಯಾದರು.
ಶಾಲೆಯಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಒಕ್ಕೊರಲಿನಿಂದ ಪ್ರಶಂಸೆಗೆ ಪಾತ್ರರಾದುದಲ್ಲದೆ ಮುಂದಿನ ವರ್ಷಕ್ಕೂ ನೇತೃತ್ವದಲ್ಲೇ ಇರಬೇಕೆಂಬ ತುಂಬಿದ ಸಭೆಯ ಕೇಳಿಕೆಯನ್ನು ಮನ್ನಿಸಿ ಅವರು ತನಗಿತ್ತ ಸ್ಥಾನವನ್ನು ಒಪ್ಪಿಕೊಂಡರು.
ಕುಂಬಳೆ ಗ್ರಾಮ ಪಂಚಾಯತಿ ಸದಸ್ಯರಾದ ವಿ.ಪಿ.ಅಬ್ದುಲ್ ಖಾದರ್ ಹಾಜಿ ಮಹಾಸಭೆಯನ್ನು ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಗುರುಮೂರ್ತಿ ವರದಿ ಮತ್ತು ಆಯವ್ಯಯ ಲೆಕ್ಕಾಚಾರವನ್ನು ಸಭೆಯ ಮುಂದಿಟ್ಟರು. ಶಿಕ್ಷಕ ವಿನುಕುಮಾರ್ ಸ್ವಾಗತಿಸಿ, ರುಕ್ಮಿಣಿ ಟೀಚರ್ ವಂದಿಸಿದರು.ಪ್ರಸ್ತುತ ಸಾಲಿನಲ್ಲಿ ಜಿಲ್ಲೆಲ್ಲೇ ಅತೀ ಹೆಚ್ಚು ಮಂದಿ ವಿದ್ಯಾರ್ಥಿಗಳು ಒಂದನೇ ತರಗತಿಗೆ ಸೇರ್ಪಡೆಗೊಂಡಿರುವ ಶಾಲೆಯಾಗಿ ಪೇರಾಲು ಶಾಲೆ ಜಿಲ್ಲೆಯಲ್ಲೇ ಹೆಸರುಗಳಿಸಿದೆ.



