ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಇದರ 29 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ನವ ನಿರ್ಮಾಣ ಸೇನೆ ಬೆಂಗಳೂರು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಜುಲೈ 14 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಾವೇಶ ನಡೆಯಲಿದೆ.
ಇದರ ಸ್ವಾಗತ ಸಮಿತಿ ಸಭೆ ಜೂ.30 ರಂದು ಕನ್ನಡ ಗ್ರಾಮದಲ್ಲಿ ಸಂಜೆ 4 ಕ್ಕೆ ನಡೆಯಲಿದೆ. ಕಾಸರಗೋಡಿನ ಕನ್ನಡ ಸಂಘಟನೆಗಳು, ಕನ್ನಡ ಹೋರಾಟಗಾರರು, ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ರೂಪುರೇಷೆ ಕುರಿತು ಮಾರ್ಗದರ್ಶನ ನೀಡಬೇಕಾಗಿ ವಿನಂತಿಸಲಾಗಿದೆ. ಸಭೆಯಲ್ಲಿ ಸ್ವಾಗತ ಸಮಿತಿ ಮತ್ತು ವಿವಿಧ ಉಪಸಮಿತಿಗಳನ್ನು ರೂಪೀಕರಿಸಲಾಗುವುದು.
ಕನ್ನಡ ಗ್ರಾಮದಲ್ಲಿ ವರ್ಷ ಪೂರ್ತಿ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಯೋಜಿಸುವುದು ಹಾಗು ಮೂರು ತಿಂಗಳಿಗೊಮ್ಮೆ ವಿವಿಧ ಸಮಾವೇಶ, ಸಮ್ಮೇಳನ, ಉತ್ಸವಗಳನ್ನು ಹಮ್ಮಿಕೊಳ್ಳಲಾಗುವುದು. ಕಾಸರಗೋಡು ವಿಲೀನೀಕರಣ, ಕನ್ನಡ ಸಮಸ್ಯೆಗಳು, ಕನ್ನಡ ಹೋರಾಟ ಚಳುವಳಿಯ ಕುರಿತು ವಿಚಾರಗೋಷ್ಠಿ ಹಾಗು ಚುಟುಕು ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ, ಹಿರಿಯ ಕವಿಗಳ ಕಾವ್ಯ ಗಾಯನ, ಹಿರಿಯ ದಾಸ ಸಂಕೀರ್ತನಕಾರರಿಂದ ದಾಸ ಸಂಕೀರ್ತನೆ ಹಾಗು ಮಕ್ಕಳು ಮಹಿಳೆಯರಿಂದ ಸಮೂಹ ದಾಸ ಸಂಕೀರ್ತನಾ ಗಾಯನ ನಡೆಯಲಿದೆ. ಕನ್ನಡ ಗ್ರಾಮದ ಸಾಂಸ್ಕøತಿಕ ಭವನದಲ್ಲಿ ಪ್ರತಿ ತಿಂಗಳ 2 ನೇ ಮತ್ತು 4 ನೇ ಭಾನುವಾರಗಳಂದು ನಿರಂತರ ಕಾರ್ಯಕ್ರಮವನ್ನು ನಡೆಸಲಾಗುವುದು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಕಾಸರಗೋಡು ಇದರ ನೇತೃತ್ವದಲ್ಲಿ 2019 ಡಿ.28 ಮತ್ತು 29 ರಂದು ಎರಡು ದಿನ ನಡೆಯುವ ಕೇರಳ ರಾಜ್ಯ 7 ನೇ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವ ಇದರ ಪೂರ್ವಭಾವಿ ಸಿದ್ಧತೆ ಕುರಿತು ಕಾಸರಗೋಡು ನಗರಸಭೆಯ ಕೌನ್ಸಿಲರ್‍ಗಳು ಮತ್ತು ಮಧೂರು ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರು, ಜನಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿದೆ ಎಂದು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು(9448572016) ತಿಳಿಸಿದ್ದಾರೆ.


