ಮುಳ್ಳೆರಿಯ: ಇಲ್ಲಿನ ವಿದ್ಯಾಶ್ರೀ ಶಿಕ್ಷಣ ಕೇ0ದ್ರದಲ್ಲಿ ಗುರು ಪೂಣಿ9ಮೆಯ ಉತ್ಸವದ ಅ0ಗವಾಗಿ ನೀಲೇಶ್ವರದ ರಾಜಾಸ್ ಹೈಸ್ಕೂಲಿನಲ್ಲಿ ಮೂವತ್ತೆರಡು ವರುಷ ಅಧ್ಯಾಪಕ ಹಾಗೂ ಪ್ರಧಾನಾಧ್ಯಾಪಕರಾಗಿ ಸೇವೆಸಲ್ಲಿಸಿದ ಸುರೇಶ್ ಕುಮಾರ್ ಪಿ.ಕೆ ಇವರನ್ನು ವಿದ್ಯಾಶ್ರೀ ವಿದ್ಯಾಲಯದ ಅಧ್ಯಾಪಕ ವೃ0ದ ಹಾಗೂ ವಿದ್ಯಾರ್ಥಿಗಳು ಮಂಗಳವಾರ ಗುರುವ0ದನೆ ಸಲ್ಲಿಸಿದರು.
ಕು.ವೈಷ್ಣವಿ ವ್ಯಾಸ ಪೂರ್ಣಿಮೆಯ ವೈಶಿಷ್ಟ್ಯವನ್ನು ಗುರುವಿನ ಹಿರಿಮೆಯ ಬಗ್ಗೆ ಮಾತನಾಡಿದಳು. ಸುರೇಶ್ ಕುಮಾರ್‍ರವರು ಗುರುವಂದನೆ ಸ್ವೀಕರಿಸಿ ಇವತ್ತಿನ ಸಮಾಜದಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರೀತಿಯಿ0ದ,ಗೌರವದಿ0ದ ಸ್ನೇಹಪೂರ್ವಕ ಶಿಕ್ಷಣವನ್ನು ನೀಡಬೇಕು. ಜೀವನದಲ್ಲಿ ಕೊನೆಯವರೆಗೆ ಆ ಅಧ್ಯಾಪಕರ ನೆನಪು ಉಳಿಯುವ0ತೆ ಮಾಡುವ0ತಹ ಶಿಕ್ಷಣ ನೀಡಬೇಕೆ0ದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಶಿಶುವಾಟಿಕ ಪ್ರಮುಖ್ ಶಾ0ತರಾಮ ಶೆಣೈ, ಶಾಲಾ ಮುಖ್ಯೋಪಾದ್ಯಾಯರಾದ ವೇಣುಗೋಪಾಲ್ ಹಾಗೂ ಶಾಲಾ ಅಧ್ಯಾಪಕ-ಅಧ್ಯಾಪಿಕೆಯವರು ಉಪಸ್ಥಿತರಿದ್ದರು. ಕೀರ್ತನರವರು 'ಗುರು ಮಾತೃ ಪಿತಾ' ಎ0ಬ ಹಾಡಿನೊ0ದಿಗೆ ಮಕ್ಕಳಿಗೆ ಗುರುವಿನ ಮೇಲಿರಬೇಕಾದ ಗೌರವವನ್ನು ಅರುಹಿದರು.
ಹತ್ತನೇ ತರಗತಿಯ ಕು.ದೀಕ್ಷಾ ಬಲ್ಲಾಳ್ ಸ್ವಾಗತಿಸಿದಳು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿ, ವ0ದಿಸಿದರು.


