ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ ಸಮಿತಿಯ ಮಹಾ ಸಭೆ ಭಾನುವಾರ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರ ಪರಿಸರದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಜಯರಾಮ ಭಟ್ ಸಭೆಯ ಅಧ್ಯಕ್ಷತೆ ವಹಿಸಿದರು. ಶ್ರೀ ಕ್ಷೇತ್ರ ಆಡಳಿತ ಮೊಕ್ತೇಸರ ಬ್ರಹ್ಮಶ್ರೀ ವಾಸುದೇವ ತಂತ್ರಿ, ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಉಪಸ್ಥಿತರಿದರು. ಈ ಸಂದರ್ಭದಲ್ಲಿ 2019ನೇ ಸಾಲಿನ 18ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವನ್ನು ಆ.23ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ತೀರ್ಮಾನಿಸಲಾಯಿತು. ಇದರ ಯಶಸ್ವಿಗಾಗಿ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರು: ಬ್ರಹ್ಮಶ್ರೀ ವಾಸುದೇವ ತಂತ್ರಿ, ಅಧ್ಯಕ್ಷರು: ಜಯರಾಮ ಭಟ್, ಉಪಾಧ್ಯಕ್ಷರು: ಪದ್ಮನಾಭ ಭಟ್, ಬಾಗೀರಥಿ ಭಟ್, ಕಾರ್ಯದರ್ಶಿ: ಪ್ರಕಾಶ.ಯಂ, ಜೊತೆ ಕಾರ್ಯದರ್ಶಿಗಳು: ಜಗದೀಶ್ ಮಾಸ್ತರ್, ಗಣೇಶ, ಲತೀಶ, ಕೋಶಾಧಿಕಾರಿ: ಬಾಲಕೃಷ್ಣ ಭಟ್, ಸದಸ್ಯರು: ಜನಾರ್ದನ ಕುಂಟಾರು, ಸದಾಶಿವ ಕುಂಟಾರು, ಪ್ರಭಾಕರ, ಶ್ರೀವಿದ್ಯಾ, ರಮಣಿ. ಚಂದ್ರಕಲಾ, ಬಾಲಕೃಷ್ಣ ಪೂಜಾರಿ, ರಾಧಾಕೃಷ್ಣ, ಸದಾಶಿವ ಅಂಬಲಿಪಳ್ಳ, ದಿಲೀಪ, ಯತೀಶ, ಶ್ರೀಧರ ಕಟ್ಟತ್ತಬಯಲು, ಪವನ್ ಕುಮಾರ್ ಭಟ್.
ಕಾರ್ಯದರ್ಶಿ ಪ್ರಕಾಶ.ಯಂ ಸ್ವಾಗತಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಭಟ್ ವಂದಿಸಿದರು.

