ಇಂದಿನ ಟಿಪ್ಪಣಿ-
ಕನ್ನಡತಿ ಅಲ್ಲ ಕನ್ನಡಿತಿ ಹೆಚ್ಚು ಸರಿ ಎನ್ನುವುದು ಸರಿ.ಅದು, ನಾನೂ ಇತ್ತೀಚೆಗಷ್ಟೇ ಅರಿತು ಅಳವಡಿಸಿಕೊಂಡ ತಿದ್ದುಪಡಿ. ಒಂದು ಪದ ಏಕೆ ಮತ್ತು ಹೇಗೆ ನಿರ್ದಿಷ್ಟ ರೂಪವನ್ನು ಪಡೆದಿದೆ ಎಂದು ಅರಿತುಕೊಂಡರೆ ಆಮೇಲೆ ಅದನ್ನು ನಾವು ತಪ್ಪಾಗಿ ಬಳಸುವ ಸಾಧ್ಯತೆಗಳು ಕಡಿಮೆ. ಈ ದಿನದ ಕಲಿಕೆ ಸಹ ನನಗೆ ಮೊದಲಿಂದಲೂ ಗೊತ್ತಿತ್ತು ಅಂತೇನಲ್ಲ. ಅಲ್ಲಿಇಲ್ಲಿ ಭಾಷಾತ ಜ್ಞ ರ ಉಪನ್ಯಾಸಗಳಲ್ಲಿ, ಲೇಖನಗಳಲ್ಲಿ ಕೇಳಿ/ಓದಿ ತಿಳಿದುಕೊಂಡು ಈಗ ನಾನು ಅಳವಡಿಸಿಕೊಂಡಿರುವ ಸಾಮಗ್ರಿ. ನಿಮಗೂ ಉಪಯೋಗಕ್ಕೆ ಬರಬಹುದು.
1. ಮೊಟ್ಟಮೊದಲಿಗಿಂತ ಮೊತ್ತಮೊದಲಿಗೆ ಮೊದಲ ಆದ್ಯತೆ.
Emphasis ಹೆಚ್ಚು ಬಳಸುವ ಜೋಡಿಪದಗಳಲ್ಲಿ ಸಾಮಾನ್ಯವಾಗಿ ಒಂದು ಭಾಗಕ್ಕೆ ಮಾತ್ರ ಸ್ವತಂತ್ರ ಅರ್ಥವಿರುತ್ತದೆ, ಇನ್ನೊಂದು dummy ಆಗಿ, ರೀತಿಯಲ್ಲಿ ಸೇರಿಕೊಳ್ಳುತ್ತದೆ. ಉದಾ: ಹಚ್ಚಹಸುರು, ತುತ್ತತುದಿ, ಕಟ್ಟಕಡೆಗೆ ಮುಂತಾದುವುಗಳಲ್ಲಿ ಹಚ್ಚ, ತುತ್ತ, ಕಟ್ಟ ಭಾಗಗಳಿಗೆ ಸ್ವತಂತ್ರ ಅರ್ಥವಿಲ್ಲ. ಆದರೆ ಕೆಲವೊಮ್ಮೆ ಅಂಥ padding ಭಾಗವೂ ಅರ್ಥಪೂರ್ಣವಾಗಿರುವುದು ಇದೆ. ನಾವು ಆ ಅರ್ಥವನ್ನು ಮನಗಾಣದೆ ತಪ್ಪುರೀತಿಯಲ್ಲಿ ಬಳಸುತ್ತೇವೆ. "ಮೊಟ್ಟಮೊದಲ" ಎಂದು ದೊಡ್ಡದೊಡ್ಡ ಲೇಖಕರೂ ಬಳಸುತ್ತಾರೆ, ಅದು "ಮೊತ್ತಮೊದಲ" ಆಗಬೇಕು. ಮೊತ್ತ ಎಂದರೆ ಒಟ್ಟು ರಾಶಿ. ಅದರಲ್ಲಿ ಮೊದಲನೆಯದು ಆದ್ದರಿಂದ ಮೊತ್ತಮೊದಲ. ಮೊತ್ತದಲ್ಲಿ + ಮೊದಲ = ಮೊತ್ತಮೊದಲ ಎಂದು ಸಪ್ತಮೀ ತತ್ಪುರುಷ ಸಮಾಸ ಎಂದು ಸಹ ಪರಿಗಣಿಸಬಹುದು. ಇನ್ನೊಂದು ಅಂಥದೇ ಜೋಡಿಪದ ಲಂಗುಲಗಾಮು. ಅವನಿಗೀಗ ಲಂಗಿಲ್ಲ ಲಗಾಮಿಲ್ಲ ಅಂತ ಹೇಳುತ್ತೇವೆ. ಲಂಗಿಲ್ಲ ಅಂದರೆ ಲಂಗ ಇಲ್ಲ ಅಂತ ಅಲ್ಲ! ಲಂಗು ಇಲ್ಲ ಸಹ ಅಲ್ಲ. ನಿಜವಾಗಿ ಅದು ಲಂಗರುಲಗಾಮು. ಲಗಾಮು ಎಂದರೆ ಕಡಿವಾಣ (ಕುದುರೆಗೆ ಕಟ್ಟುವಂಥದ್ದು). ಲಂಗರು ಎಂದರೆ . ದೋಣಿಯನ್ನು/ಹಡಗನ್ನು ಬಂದರಿನಲ್ಲಿ ಕಟ್ಟಿಹಾಕಲಿಕ್ಕೆ ಬಳಸುವಂಥದು. ಲಂಗರು ಇಲ್ಲ ಲಗಾಮು ಇಲ್ಲ ಅಂದರೆ ಯಾವ ನಮೂನೆಯ ನಿಯಂತ್ರಣವೂ ಇಲ್ಲ, ಸ್ವೇಚ್ಛಾಚಾರಿಯಾಗಿ ಇರುವ ರೀತಿ. - ಇದು ನಿಘಂಟುತ??? ಪ್ರೊ.ಜಿ.ವೆಂಕಟಸುಬ್ಬಯ್ಯನವರು ಗ್ರಂಥವೊಂದರಲ್ಲಿ ಕೊಟ್ಟಿರುವ ವಿವರಣೆ.
2. ಅವತ್ತು ಅಲ್ಲ, ಆವತ್ತು!
ಹಿಂದೆ ನಡೆದ ಘಟನೆಯನ್ನು ವಿವರಿಸುವಾಗ ನಾವು ಅವತ್ತು ಅಥವಾ ಅವತ್ತಿನ ದಿನ ಎಂಬ ಪದಪುಂಜ ಬಳಸುತ್ತೇವೆ. ಅದರಲ್ಲಿ ಅ ಹ್ರಸ್ವಸ್ವರದ ಬದಲಿಗೆ ಆ ದೀರ್ಘಸ್ವರ ಬಳಸಬೇಕು. ಏಕೆಂದರೆ, ಆ + ಹೊತ್ತು ಎಂಬ ಪದಜೋಡಿ ಸೇರಿ ಆಹೊತ್ತು ಆಗಿ ಉಚ್ಚಾರಸೌಲಭ್ಯಕ್ಕಾಗಿ ಆವತ್ತು ಆಗುತ್ತದೆ. ಹಾಗಾಗಿ ಅವತ್ತು ಎನ್ನುವುದು ಸರಿಹೋಗದು.
3. ಕಲಿಕಾ ಎನ್ನುವಷ್ಟು ಸಂಸ್ಕೃತಾನುಕರಣ ಬೇಕಾಗಿಲ್ಲ:
ರಕ್ಷಣಾ ಸಚಿವ, ನಿರ್ಮೂಲನಾ ಮಂಡಲಿ, ನಟನಾ ಚಾತುರ್ಯ, ಭಾಷಾ ವೈವಿಧ್ಯ ಮುಂತಾದ ಪದಪುಂಜಗಳಲ್ಲಿ ಮೊದಲ ಪದವನ್ನು ಆ ಕಾರಾಂತವಾಗಿ ಬಳಸುವುದು ಸರಿಯಾದ ರೀತಿಯೇ. ಅವು ಸಂಸ್ಕೃತದ ಪದಗಳು. ಅನುಕ್ರಮವಾಗಿ ರಕ್ಷಣೆಯ, ನಿರ್ಮೂಲನೆಯ, ನಟನೆಯ, ಭಾಷೆಯ ಎಂಬ ಷಷ್ಠೀವಿಭಕ್ತಿ ರೂಪವನ್ನೇ ಧ್ವನಿಸಲು ಆ ಕಾರಾಂತವಾಗಿ ಬಳಸುತ್ತೇವೆ. ಆದರೆ ಅದೊಂದು ಸ್ಟೈಲ್ ಇರಬೇಕು ಅಂದುಕೊಂಡು ಕಲಿಕೆಯ ಎಂಬ ಶುದ್ಧ ಕನ್ನಡಪದವನ್ನು ಸಹ ಕಲಿಕಾ ಎಂದು ಮಾಡುತ್ತೇವೆ. ಅದು ತಪ್ಪು. ಇತ್ತೀಚಿಗೆ ಹುಟ್ಟಿಕೊಂಡ ಪಿಡುಗು ಎನ್ನಬಹುದು. ಕಲಿಕೆ ಎನ್ನುವುದು ಸಂಸ್ಕೃತ ಪದವಲ್ಲ. ಕನ್ನಡ ಪದ. ಅದನ್ನು ಆ ಕಾರಾಂತವಾಗಿಸಿದರೆ ಷಷ್ಠೀವಿಭಕ್ತಿಯ ಪರ್ಯಾಯವಾಗುವುದಿಲ್ಲ. ಆದ್ದರಿಂದ ಕಲಿಕಾ ಕೇಂದ್ರ, ಕಲಿಕಾ ವಿಧಾನ ಇವೆಲ್ಲ ತಪ್ಪು ಬಳಕೆಗಳು. ಪ್ರಜಾವಾಣಿಯಂಥ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲೂ ಆ ತಪ್ಪು ಬಳಕೆ ಇದೆ ಎಂದರೆ ತಿದ್ದುಪಡಿ ಆಗಲೇಬೇಕಾಗಿದೆ.
ಶ್ರೀವತ್ಸ ಜೋಶಿ. ವಾಶಿಂಗ್ಟ್ ನ್ ಡಿ.ಸಿ.
ಮುಂದುವರಿಯುವುದು......
FEEDBACK: samarasasudhi@gmail.com