ನವದೆಹಲಿ: ವಿಶ್ವದ ಅತಿ ದೊಡ್ಡ ರಕ್ಷಣಾ ಒಪ್ಪಂದ ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ.
ಭಾರತೀಯ ವಾಯುಸೇನೆಗೆ 114 ಯುದ್ಧ ವಿಮಾನ ಖರೀದಿಸುವ 1.02 ಲಕ್ಷ ಕೋಟಿ ರೂ.(15 ಬಿಲಿಯನ್ ಡಾಲರ್) ವ್ಯವಹಾರದ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದು ವಿಶ್ವದಲ್ಲೆ ಅತಿ ಹೆಚ್ಚು ಮೊತ್ತದ ರಕ್ಷಣಾ ಒಪ್ಪಂದವಾಗಲಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಇನ್ನೆರಡು ವರ್ಷದೊಳಗೆ ಎಲ್ಲ ರೀತಿಯ ತಾಂತ್ರಿಕ ಪರೀಕ್ಷೆಗಳು ಮುಗಿದು ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ.
ಭಾರತದ ವಾಯುಸೇನೆ ಹಾಗೂ ನೌಕಾದಳಕ್ಕೆ ಸುಮಾರು 400 ಯುದ್ಧ ವಿಮಾನಗಳ ಅಗತ್ಯವಿದೆ. ಆದರೆ ರಫೇಲ್?ನಿಂದ ಕೇವಲ 36 ಯುದ್ಧ ವಿಮಾನಗಳು ಸಿಗುತ್ತಿವೆ. ಉಳಿದಂತೆ ಎಚ್ ಎಎಲ್ ನಿರ್ಮಿಸುವ ತೇಜಸ್ ಹಾಗೂ ಸುಖೋಯ್ ಮೂಲಕ 160ಕ್ಕೂ ಅಧಿಕ ಯುದ್ಧ ವಿಮಾನಗಳ ಬೇಡಿಕೆ ಈಡೇರಲಿದೆ. ಆದಾಗ್ಯೂ ಮತ್ತೆ 100 ವಿಮಾನಗಳು ಕೊರತೆ ಬೀಳಲಿವೆ.
ಆದರೆ ಪಾಕಿಸ್ತಾನ ಹಾಗೂ ಚೀನಾದಂಥ ನೆರೆಹೊರೆಯ ರಾಷ್ಟ್ರಗಳಿರುವಾಗ ಪ್ರಬಲ ಯುದ್ಧ ವಿಮಾನ ಹೊಂದದಿರುವುದು ಭಾರತಕ್ಕೆ ಸವಾಲಿನ ವಿಚಾರವಾಗಲಿದೆ. ಹೀಗಾಗಿ ಶೀಘ್ರದಲ್ಲೆ 114 ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಅಂತಿಮ ಗೊಳಿಸಲಾಗುವುದು ಎಂದು ಲೋಕಸಭೆಗೆ ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ ತಿಳಿಸಿದ್ದಾರೆ.
ಭಾರತದಲ್ಲಿ ಶೇ.85 ಉತ್ಪಾದನೆ: ಒಂದು ಲಕ್ಷ ಕೊ?ಟಿ ರೂ.ಗೂ ಅಧಿಕ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಭಾರತ ಹೊಸದೊಂದು ಷರತ್ತು ಹಾಕಿದ್ದು, ಶೇ.85 ವಿಮಾನಗಳ ಉತ್ಪಾದನೆ ಭಾರತದಲ್ಲೆ ಆಗಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ ಈ ಒಪ್ಪಂದವು ರಕ್ಷಣಾ ವಲಯದಲ್ಲಿನ ಮೆ?ಕ್ ಇನ್ ಇಂಡಿಯಾ ಯೋಜನೆಗೆ ಬಲ ನೀಡಲಿದೆ.
ಯಾರ್ಯಾರು ರೇಸಲ್ಲಿ?
ಬೋಯಿಂಗ್: ಎಚ್ ಎಎಲ್ ಹಾಗೂ ಮಹೀಂದ್ರಾ ಜೊತೆಗೆ ಬೋಯಿಂಗ್ ಒಪ್ಪಂದ ಮಾಡಿಕೊಂಡಿದ್ದು, ಎಫ್/ಎ-18 ಯುದ್ಧ ವಿಮಾನ ಉತ್ಪಾದನೆಗೆ ಆಸಕ್ತಿ ತೋರಿದೆ.
ಲಾಕ್ ಹಿಡ್ ಮಾರ್ಟಿನ್: ಎಫ್-21 ಯುದ್ಧ ವಿಮಾನ ಖರೀದಿಗೆ ಅನುಮತಿ ದೊರೆತರೆ ಟಾಟಾ ಗ್ರೂಪ್ ಜೊತೆ ಸೇರಿ ವಿಮಾನ ಉತ್ಪಾದನೆ.
ಸ್ಯಾಬ್: ಗ್ರಿಪನ್ ಯುದ್ಧ ವಿಮಾನ ಖರೀದಿಗೆ ಅನುಮತಿ ನೀಡಿದರೆ ಅದಾನಿ ಕಂಪನಿ ಜೊತೆ ಸೇರಿ ಯುದ್ಧ ವಿಮಾನ ಉತ್ಪಾದನೆ. ಒಪ್ಪಂದ ಅಂತಿಮಗೊಂಡರೆ ಸ್ಯಾಬ್ ಸಂಪೂರ್ಣ ಕಚೇರಿ ಹಾಗೂ ಉತ್ಪಾದನಾ ಘಟಕ ಭಾರತಕ್ಕೆ ವರ್ಗಾಯಿಸುವ ಭರವಸೆ.


