ಬದಿಯಡ್ಕ: ವಾಂತಿಚ್ಚಾಲಿನ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ 51ನೇ ವರ್ಷದ "ಆಟಿಟೊಂಜಿ ಅಟ್ಟಣೆ" ವಿಶೇಷ ಕಾರ್ಯಕ್ರಮ ಜು.21 ರಂದು ವಾಂತಿಚ್ಚಾಲಿನ ಲಕ್ಷ್ಮೀ ನಿಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6ರಿಂದ ಗಣಪತಿ ಹೋಮ, 9ರಿಂದ ಬಲೆ ತುಳು ಬರವು ಕಲ್ಪುಗ ತುಳು ಲಿಪಿ ಪರಿಚಯ ಕಾರ್ಯಕ್ರಮ ನಡೆಯಲಿದೆ. ವಿದ್ಯಾಶ್ರೀ ಎಸ್.ಉಳ್ಳಾಲ್ ಕಾರ್ಯಕ್ರಮ ನಡೆಸಿಕೊಡುವರು. 10 ರಿಂದ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಉದ್ಘಾಟಿಸುವರು. ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಕಾಸರಗೋಡು ತುಳು ಲೇಖಕರ ಸಂಘದ ಅಧ್ಯಕ್ಷ ಸತೀಶ ಸಾಲಿಯಾನ್ ನೆಲ್ಲಿಕುಂಜೆ, ಪತ್ರಕರ್ತರಾದ ಜಯ ಮಣಿಯಂಪಾರೆ, ಅಖಿಲೇಶ್ ನಗುಮುಗಂ, ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡಿನ ನಿರ್ದೇಶಕ ಶ್ರೀಕಾಂತ್ ನೆಟ್ಟಣಿಗೆ, ಕುಲಾಲ ಸಮಾಜ ಸುಧಾರಕ ಸಂಘ ಕಾಸರಗೋಡಿನ ಅಧ್ಯಕ್ಷ ಸುಮದರ ಕಟ್ನಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಮಧ್ಯಾಹ್ನ 12.30 ರಿಂದ ಮದ್ಮಯ ಮದ್ಮಲೆನ ಕುಸಲ್ದ ಎಸಲ್ ವಿಶೇಷ ಸ್ಪರ್ಧಾ ಕಾರ್ಯಕ್ರಮ ನಡೆಯಲಿದ್ದು, ಹರ್ಷ ರೈ ಪುತ್ರಕಳ ಹಾಗೂ ಶೃತಿ ಹರ್ಷ ರೈ ಪುತ್ರಕಳ ನಿರ್ವಹಿಸುವರು.
ಸಂಜೆ 4ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಬಿ.ಪಿ.ಶೇಣಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಮಾಜಿ ಸೈನಿಕ ಎಂ.ಎಂ.ಮೂಲ್ಯ ಓಡಗದ್ದೆ ಕಿದೂರು, ನೃತ್ಯ-ಯಕ್ಷ ಬಾಲ ಪ್ರತಿಭೆ ಶರಣ್ಯ ಪಿ.ಬಂಗೇರ ತಲಪಾಡಿ, ದೈ ನರ್ತಕ ಐತ್ತಪ್ಪ ನಲಿಕೆ ಕಣ್ಣೂರು, ಡಾ.ಸಂಧ್ಯಾ ಕುಮಾರಿ ಪಿ.ಅರೆಮಂಗಿಲ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಜ್ಯೋತಿಷ್ಯ ತಿಲಕ ಶಶಿಧರ ಮಾಂಗಾಂಡ್ ಸನ್ಮಾನಿಸುವರು. ದೆಹಲಿಯ ಲೋಕ ಕಲಾ ಪರಿಷತ್ತಿನ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ, ಚೆನ್ನಿಕುಡಾಲು ಶ್ರೀನಾಗಬ್ರಹ್ಮ, ಮಲರಾಯಿ ದೈವಸ್ಥಾನದ ಅಧ್ಯಕ್ಷಚೆನ್ನಪ್ಪ ಕುಲಾಲ್ ಎರುಗಲ್ಲು, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಂಜೆ 5 ರಿಂದ ಆಟಿಕಳಂಜ ನಲಿಕೆ ವಿಶೇಷ ಪ್ರದರ್ಶನ, ರಾತ್ರಿ 8 ರಿಂದ ದೈವಗಳಿಗೆ ಅಗೆಲು ತಂಬಿಲ ಸೇವೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಸಂಯೋಜಕರಾದ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


