ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ರಾಜ್ಯ ಸೇವಾ ಪಿಂಚಣಿದಾರರ ಯೂನಿಯನ್ ನೇತೃತ್ವದಲ್ಲಿ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ಮತ್ತು ಧರಣಿ ನಡೆಯಿತು.
ಪಾಲುದಾರಿಕೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು, ಸ್ಟಾಟ್ಯೂಟರಿ ಪಿಂಚಣಿಯನ್ನು ಪುನ: ಸ್ಥಾಪಿಸಬೇಕು, 2019 ಜುಲೈ 1 ರಿಂದ ಅನ್ವಯವಾಗುವಂತೆ ಪಿಂಚಣಿ ಪರಿಷ್ಕರಿಸುವ ವ್ಯವಸ್ಥೆ ಕೂಡಲೇ ಜಾರಿಯಾಗಬೇಕು, 70 ವರ್ಷ ಪ್ರಾಯ ದಾಟಿದ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ನೀಡಬೇಕು, ಪಿಂಚಣಿದಾರರಿಗೆ ಪ್ರತ್ಯೇಕ ಚಿಕಿತ್ಸಾ ಯೋಜನೆ ಜಾರಿಗೊಳಿಸಬೇಕು, ವೈದ್ಯಕೀಯ ವಿಮೆ ಜಾರಿಗೊಳಿಸಬೇಕು, ಕ್ಷೇಮ ಯೋಜನೆ ಜಾರಿಗೊಳಿಸಬೇಕು, 20 ವರ್ಷ ಸರ್ವೀಸ್‍ನಲ್ಲಿದ್ದವರಿಗೆ ಪೂರ್ಣ ಪ್ರಮಾಣದಲ್ಲಿ ಪಿಂಚಣಿ ನೀಡಬೇಕು, ಒಂದು ತಿಂಗಳ ವೇತನವನ್ನು ಉತ್ಸವ ಪಿಂಚಣಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ„ಕಾರಿ ಕಚೇರಿಗೆ ಜಾಥಾ ಮತ್ತು ಧರಣಿ ಆಯೋಜಿಸಿತ್ತು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಕೆ.ಮಾಧವನ್ ನಾಯರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷ ವಿ.ಕೃಷ್ಣನ್ ಉದ್ಘಾಟಿಸಿದರು. ಧರಣಿಗೆ ಮುನ್ನ ಪಿಂಚಣಿದಾರರಿಂದ ಜಿಲ್ಲಾ„ಕಾರಿಗೆ ಮೆರವಣಿಗೆ ನಡೆಯಿತು.


