ಮಂಜೇಶ್ವರ: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವರ್ಕಾಡಿ ಘಟಕ ಸಮಿತಿ ಮತ್ತು ಗ್ರಾಮ ಸಮಿತಿ ಹಾಗು ಗುರುದೇವ ಬಂಧುಗಳ ಸಹಯೋಗದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ವರ್ಕಾಡಿಯಲ್ಲಿ ಜು.21 ರಂದು ಜರಗಲಿರುವ ಗ್ರಾಮ ಸ್ವಚ್ಛತಾ ಮತ್ತು ಕೆಸರುಗದ್ದೆಯಲ್ಲಿ ಆಟೋಟ ಸ್ಪರ್ಧೆ ಹಾಗು ಭತ್ತದ ನಾಟಿ ಉತ್ಸವದ ಪೂರ್ವಭಾವಿ ಸಭೆ ವರ್ಕಾಡಿ ಪ್ರಾದೇಶಿಕ ಕಚೇರಿಯಲ್ಲಿ ಘಟಕ ಸಮಿತಿ ಅಧ್ಯಕ್ಷ ಸದಾಶಿವ ಟೈಲರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಸಭೆಯಲ್ಲಿ ಮಂಜೇಶ್ವರ ಜಮ್ಮದ ಮನೆಯ ಶಶಿಧರ ಶೆಟ್ಟಿ, ಗೋಪಾಲ ಶೆಟ್ಟಿ ನೆತ್ಯ ಅರಿಬೈಲು ಉಪಸ್ಥಿತರಿದ್ದರು. ಜಮ್ಮದಮನೆಯ ಹರಿಣಾಕ್ಷಿ, ಗ್ರಾಮ ಸಮಿತಿಯ ಅಧ್ಯಕ್ಷ ಕಿಶೋರ್ ಕೊಡ್ಲಮೊಗರು, ಪಾವೂರು ಚಾಮುಂಡೇಶ್ವರೀ ದೈವಸ್ಥಾನದ ಅಧ್ಯಕ್ಷ ಸುಧಾಕರ ಶೆಟ್ಟಿ ಪಾವೂರು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಗ್ರಾಮ ಸಂಯೋಜಕಿ ಲೀಲಾವತಿ, ಸೇವಾ ದೀಕ್ಷಿತೆ ಮಮತಾ ಲಕ್ಷ್ಮೀ, ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ಆನಂದ ತಚ್ಚಿರೆ, ವಾಮನ್ ಬೋರ್ಕಳ, ಸನೋಜ್ ಕೊಡ್ಲಮೊಗರು, ರವಿ ಮುಡಿಮಾರ್, ಜಯರಾಜ್ ಬಜಾಲ್, ನಾರಾಯಣ ಶೆಟ್ಟಿ ಬಜಾಲ್, ಮಾಧವ ಕುದ್ಕೋಳಿ, ವಿನೋದ್ ರೆಂಜೆಪಡ್ಪು, ಭೂಮಿಯ ಮಾಲಿಕ ಪ್ರಮೋದ್ ಕುಮಾರ್ ಕಾಪ್ರಿ, ಗಣೇಶ್, ಬಾಲಕೃಷ್ಣ ಶೆಟ್ಟಿ ಮುಟ್ಟುಂಜ ಭಾಗವಹಿಸಿದರು.
ಘಟಕ ಸಮಿತಿಯ ಕಾರ್ಯದರ್ಶಿ ಕಿಶನ್ ಕುಮಾರ್ ಸ್ವಾಗತಿಸಿ, ಮಮತಾ ಲಕ್ಷ್ಮೀ ವಂದಿಸಿದರು. ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

