ಉಪ್ಪಳ: ಬಾಯಾರು ಸಮೀಪದ ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಉತ್ತರ ಪೂಜಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನವೀಕರಣಗೊಳ್ಳುತ್ತಿರುವ ದೇವಸ್ಥಾನದ ಗರ್ಭಗುಡಿಯ ಮೇಲ್ಭಾಗದ ಮಾಡಿಗೆ ಕೆತ್ತಲ್ಪಟ್ಟ ಮರವನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕುಶಲ ಕರ್ಮಿ ಸುರೇಶ್ ಆಚಾರ್ಯ ತ್ರಿಶೂರು ಉತ್ತರ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಊರ ಭಕ್ತ ಜನರು ಭಾಗವಹಿಸಿದ್ದರು. ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ವಾಟೆತ್ತಿಲ ದೇವಸ್ಥಾನದಲ್ಲಿ ಉತ್ತರ ಪೂಜೆ
0
ಜುಲೈ 14, 2019