ಕಾಸರಗೋಡು: ಕರ್ನಾಟಕ ನವ ನಿರ್ಮಾಣ ಸೇನೆ ಬೆಂಗಳೂರು ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ಕನ್ನಡ ಗ್ರಾಮ ಇದರ ಸಹಯೋಗದಲ್ಲಿ ಜು.21 ರಂದು ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಾವೇಶ-2019 ನಡೆಯಲಿದೆ.
ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯ ವರೆಗೆ ಕಾರ್ಯಕ್ರಮ ನಡೆಯುವುದು. ಕರ್ನಾಟಕ ನವನಿರ್ಮಾಣ ಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕುಂ.ವೀರಭದ್ರಪ್ಪ ಅವರು ಉದ್ಘಾಟಿಸುವರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಆಶಯ ನುಡಿಯನ್ನಾಡುವರು. ಅತಿಥಿಗಳಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಹರ್ಷಾದ್, ಪ್ರಮೀಳಾ ಸಿ.ನಾೈಕ್, ಮಾಲತಿ ಸುರೇಶ್, ಆಯಿಷಾ ಎ.ಎ.ಪೆರ್ಲ, ಶಂಕರ ಕೆ, ತಾರಾನಾಥ ಬೋಳಾರ, ಎಸ್.ಎಲ್.ಭಾರದ್ವಾಜ್ ಬೇಕಲ್, ಕೆ.ಗುರುಪ್ರಸಾದ್ ಕೋಟೆಕಣಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಪ್ರೇಮಲತಾ ಗೋಕುಲದಾಸ್ ಕುಂಬಳೆ ಮತ್ತು ವೀಣಾ ಪ್ರಸನ್ನ ಶ್ಯಾನುಭೋಗ್ ಅವರನ್ನು ಗೌರವಿಸಲಾಗುವುದು.
ಸಮಾವೇಶದ ಬಳಿಕ ಗಡಿನಾಡ ಚುಟುಕು ಕವಿಗೋಷ್ಠಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಉದ್ಘಾಟಿಸುವರು. ಸಾಹಿತಿ ವಿ.ಬಿ.ಕುಳಮರ್ವ ಅಧ್ಯಕ್ಷತೆ ವಹಿಸುವರು. ಕರಾವಳಿ ಕಾವ್ಯ ಸೌರಭ, ಕರಾವಳಿ ಸಾಂಸ್ಕøತಿಕ ವೈಭವ, ನೃತ್ಯ ವೈವಿಧ್ಯ, ಕರಾವಳಿ ಸಂಕೀರ್ತನಾ ವೈವಿಧ್ಯ, ಚಿತ್ರಕಲಾ ಪ್ರದರ್ಶನ ಮೊದಲಾದವು ನಡೆಯಲಿದೆ.


