ಪುಸ್ತಕ:ಸಾಕಿ ಗಝಲ್ ಸಂಕಲನ
ಕವಿ: ಅಲ್ಲಾಗಿರಿರಾಜ್ ಕನಕಗಿರಿ
ಬರಹ:ಚೇತನಾ ಕುಂಬಳೆ
ಕೊಪ್ಪಳ ಜಿಲ್ಲೆಯ ಕನಕಗಿರಿಯ ಅಲ್ಲಾಗಿರಿರಾಜ್ ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ, ವಿಶೇಷವಾಗಿ ಕನ್ನಡ ಗಜಲ್ ಗಳನ್ನು ರಚನೆ ಮಾಡುತ್ತಿರುವವರಲ್ಲಿ ಒಬ್ಬರು. ರಾಜಸ್ಥಾನದ ಥಾರ್ ಮರುಭೂಮಿ ತನ್ನ ಗಜಲ್ ಗುರು ಎಂದು ಹೇಳಿಕೊಳ್ಳುತ್ತಾರೆ. ಅವರಿಗೆ ಗಜಲ್ ಎಂದರೆ 'ಗಿರಿರಾಜನ ಜೀವದುಸಿರು'. *ಗಿರಿರಾಜ* ಎಂಬ ಕಾವ್ಯನಾಮದಲ್ಲಿ ಅವರು ಗಜಲ್ ಗಳನ್ನು ರಚಿಸುತ್ತಿದ್ಧಾರೆ. 'ನೂರ್ ಗಜಲ್', '99 ಗಜಲ್', 'ಸುರೂರ್ ಗಜಲ್, 'ಆಜಾದಿ ಗಜಲ್', 'ಸಾಕಿ ಗಜಲ್' ಸಂಕಲನಗಳಲ್ಲದೆ ಹಲವಾರು ಸಾಹಿತ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವರ ನೂರ್ ಗಜಲ್ ಸಂಕಲನ ಗಜಲ್ ಸಾಹಿತ್ಯದಲ್ಲಿ ವಿಶಿಷ್ಟವಾದ ಇತಿಹಾಸವನ್ನೇ ಸೃಷ್ಟಿಸಿದೆ. ಅವರು ವಿದ್ಯಾರ್ಥಿ ದೆಸೆಯಿಂದಲೇ ಕಾದಂಬರಿ ಕಥೆ, ಕವನ ಲೇಖನ ಐತಿಹಾಸಿಕ ವಿಚಾರಗಳ ಕುರಿತು ಹೆಸರು ಮಾಡಿದವರು. ಅಕ್ಷರದ ಅರಿವಿಗಾಗಿ ಸಾಕ್ಷರತಾ ಆಂದೋಲನದಲ್ಲಿ ಬೀದಿ ನಾಟಕದ ಮೂಲಕ ಅರಿವು ಮೂಡಿಸಿದವರು.
"ಗಜಲ್ ನಿಜಕ್ಕೂ ನನಗೊಂದು ಧ್ಯಾನವಾಗಿದೆ. ದಿನಾ ಮುಂಜಾನೆ ಗಜಲ್ ಬರೆಯದಿದ್ಧರೆ ಮನಸ್ಸು ಹಗುರವಾಗುವುದಿಲ್ಲ, ದಿಲ್ ಖುಷ್ ಇರುವುದಿಲ್ಲ" ಎಂದು ಹೇಳುವಲ್ಲಿ ಅವರು ಗಜಲನ್ನು ಎಷ್ಟು ಇಷ್ಟ ಪಡ್ತಾರೆ ಪ್ರೀತಿಸ್ತಾರೆ,ಧ್ಯಾನಿಸ್ತಾರೆ ಎಂಬುದನ್ನು ತಿಳಿಯಬಹುದು.
*ಸಾಕಿ ಗಜಲ್* ಸಂಕಲನದಲ್ಲಿ ಒಟ್ಟು 90ಗಜಲ್ ಗಳಿವೆ. ಅವೆಲ್ಲವನ್ನೂ ಅಂತಾರಾಷ್ಟ್ರೀಯ ಕಲಾವಿದರಾದ ಹಾದಿಮನಿ ಟಿ.ಎಫ್. ಅವರ ಪ್ರೇರಣೆಯಿಂದ ಕೇವಲ 14 ದಿನಗಳಲ್ಲಿ ರಚಿಸಿದ್ದಾರೆ. ಇದಕ್ಕೆ ಶಶಿಕಲಾ ವೀರಯ್ಯ ಸ್ವಾಮಿ ಅವರು ಮುನ್ನುಡಿ ಬರೆದಿದ್ದಾರೆ. ಇದರ ಆರಂಭದಲ್ಲೇ ಗಜಲ್ ಸಾಹಿತ್ಯದಲ್ಲಿ ಪ್ರಾಧಾನ್ಯತೆಯನ್ನು ಪಡಕೊಂಡಿರುವ ಮಧುಶಾಲೆ, ಮದಿರೆ, ಸಾಕಿಯ ಕುರಿತಾದ ಶಾಂತರಸರ ಅಭಿಪ್ರಾಯಗಳನ್ನು ಅವರ 'ಉರ್ದು ಕಾವ್ಯದಲ್ಲಿ ಮದಿರೆ' ಎಂಬ ಪುಸ್ತಕದಿಂದ ಆಯ್ದು ನೀಡಿದ್ದಾರೆ.
ಪಿ ಮಧುಶಾಲೆ: ಅಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ.ಕಾವ್ಯಲೋಕದಲ್ಲಿ ಅದಕ್ಕೆ ವಿಶೇಷಾರ್ಥವಿದೆ. "ಅದು ಕೇವಲ ಮಧುಶಾಲೆಯಾಗಿರಲಿಲ್ಲ. ಕವಿಗಳು ಮಧುಪಾನ ಮಾಡುತ್ತಾ ಮಾತನಾಡುತ್ತಿದ್ದರು. ಚಿಂತನೆಗೈಯುತ್ತಿದ್ದರು. ಅದೊಂದು ಚಿಂತನ ಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು."
ಪಿಸಾಕಿ: ಎಂದರೆ ಸಾಮಾನ್ಯ ಅರ್ಥ ಮದ್ಯ ಮತ್ತು ಹುಕ್ಕಾ ಕುಡಿಸುವವನು.ಆದರೆ, ಗಜಲ್ ಗಳಲ್ಲಿ ಅವನಿಗೊಂದು ಮಹತ್ವದ ಸ್ಥಾನವಿದೆ; ಅವನು ಸ್ವತಂತ್ರನೂ,ಸ್ವಯಂ ಅಧಿಕಾರವುಳ್ಳವನೂ, ಸಭಾಧ್ಯಕ್ಷ ಎಂದು ವರ್ಣಿತವಾಗಿದ್ಧಾನೆ.ಕೇವಲ ಮದ್ಯ ಕುಡಿಸುವವನಲ್ಲ, ಕವಿಗಳಷ್ಟೇ ಕಾವ್ಯ ಬಲ್ಲವನು. ಸಾಕಿಯನ್ನು ಸ್ತ್ರೀಲಿಂಗವಾಗಿಯೂ ಪುಲ್ಲಿಂಗವಾಗಿಯೂ ಗಜಲ್ ಗಳಲ್ಲಿ ಬಳಸುತ್ತಾರೆ.
ಪಿ ಮದ್ಯ: ಎಂದರೆ ಅಮಲು ಬರಿಸುವುದೇ. ಅಮಲು ಎಂದರೆ, ಸೂಫಿಗಳ ಪ್ರಕಾರ ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು.
ಸೂಫಿ ಪ್ರೇಮಕಾವ್ಯ ಸಂಕಲದಿಂದ ವಿವಿಧ ಪುಸ್ತಕಗಳಿಂದ ಹಾಗೇ ಸಾಮಾಜಿಕ ಜಾಲತಾಣಗಳಿಂದ ಆಯ್ದು ಮಧುಬಟ್ಟಲು, ಮದಿರೆ, ಬಗೆಗೂ ಒಂದಿಷ್ಟು ಸಂಕ್ಷಿಪ್ತ ಮಾಹಿತಿಗಳನ್ನು ನೀಡುತ್ತಾರೆ.
" ಜೀವನವು ಏನೆಂದು ನಾನು ಕೇಳಿದೆನು
ಕೈಜಾರಿ ಬಿದ್ದು ಜಾಮು ಒಡೆದು ಹೋಯ್ತು"
- ಜಗನ್ನಾಥ 'ಆಜಾದ್', ಅನುವಾದ ಶಾಂತರಸ
"ಸುರೆಯ ರುಚಿಯೇನೆಂದು ಹೇಳಲಿ ದೇವಭಕ್ತ
ಅಯ್ಯೋ ದುರ್ದೈವಿ ನೀನದನ್ನು ಕುಡಿದೇ ಇಲ್ಲವಲ್ಲ" -ದಾಗ್
ಈ ಸಂಕಲನದ ಎಲ್ಲ ಗಜಲ್ ಗಳಲ್ಲಿ ಮಧುಶಾಲೆ, ಮದಿರೆ, ಸಾಕಿ ಮುಖ್ಯವಾಗಿ ಕಂಡು ಬರುತ್ತಾರೆ ಅವುಗಳ ಬಗೆಗಿನ ಪ್ರೀತಿ, ಭಕ್ತಿ, ಒಂದು ರೀತಿಯ ಆರಾಧನಾ ಮನೋಭಾವ ವ್ಯಕ್ತ ವಾಗುತ್ತದೆ. ಇಲ್ಲಿ ಮಧುಶಾಲೆಗೆ ಬರುವವರಿಗೂ ಇರಬೇಕಾದ ಅರ್ಹತೆಗಳೇನೆಂದು ತಿಳಿಸುತ್ತಾರೆ. ಅಲ್ಲಿ ಧರ್ಮವನ್ನು ನಂಬಿದವರಿಗೆ, ಹೆಂಡತಿ-ಮಕ್ಕಳನ್ನು ತೊರೆದು ಬಂದವರಿಗೆ, ಮಧುಶಾಲೆಯಲ್ಲಿ ಪ್ರವೇಶವಿಲ್ಲ ಎನ್ನುತ್ತಾರೆ.
"ಪವಿತ್ರ ಸ್ಥಳ ಎಲ್ಲಿದೆ ಎಂದು ಸಂತ ಹುಡುಕುತ್ತಿದ್ದ, ಕೊನೆಗೆ ಮಧುಶಾಲೆಗೆ ಬಂದ" ಎನ್ನುವಲ್ಲಿ ಮದುಶಾಲೆ ಕಾಬಾ, ಕಾಶಿಗಿಂತಲೂ ಒಂದು ಪುಣ್ಯಸ್ಥಳ ಎನ್ನುತ್ತಾರೆ. ಇಲ್ಲಿ ಆಗಮಿಸುವವರ ಜೀವನ ಪಾವನವಾಗುತ್ತದೆ ಎಂದು ಹೇಳುತ್ತಾರೆ.
"ಮಧುಶಾಲೆಯಲ್ಲಿ ನವಾಬ್,ಜನಾಬ್ ಗಳಿಗೆ ತಾರತಮ್ಯವಿಲ್ಲ"
"ಊರ ಅಂಗಳದಲ್ಲಿ ಸಂಬಂಧ ಮುರಿದಿದ್ದರೂ ಮಧುಬಟ್ಟಲು ಕೂಡಿಸುತ್ತದೆ ಅದಕ್ಕೆ ಬೇಧವಿಲ್ಲ" ಎಂಬ ಮಾತು ಮಧುಶಾಲೆಯಲ್ಲಿ ಎಲ್ಲರೂ ಸಮಾನರೆಂಬುದನ್ನು ಸೂಚಿಸುತ್ತದೆ.
ಲೇಖಕರು ಅದೆಷ್ಟೋ ಕಾಲ ತನ್ನೊಳಗೆ ಬೆರೆತಿರುವ ಸಾಕಿಯನ್ನು ಗುರು ಎನ್ನುತ್ತಾರೆ, ಅರಿವು ಎನ್ನುತ್ತಾರೆ. "ಮದಿರೆಯ ಸುಖದ ಮುಂದೆ ಮತ್ತಾವ ಸುಖವೂ ಇಲ್ಲ, ದೇವರ ಸಾವಿರ ಸ್ವರ್ಗಕ್ಕೆ ಸಮ ಮಧುಬಟ್ಟಲ ಸುಖ" ಎಂದು ಹೇಳುತ್ತಾರೆ. ಪ್ರವಚನಕ್ಕೆ ಬಂದ ಧರ್ಮಗುರು ಧರ್ಮವನ್ನೇ ಮರೆತ ಎಂಬಲ್ಲಿ ಲೇಖಕರು ಸಾಕಿಯ ಕಣ್ಣನೋಟದ ತೀಕ್ಷ್ಣತೆ ಎಷ್ಟಿದೆ ಅಂತ ಹೇಳುತ್ತಾರೆ.
"ಧರ್ಮ ಒಂದು ದೊಂಬರಾಟ, ಮಧುಶಾಲೆಗಿಂತ ನಶೆ ಅದು, ಹತ್ತಿರ ಹೋಗದೆ ಇದ್ಧು ಬಿಡು"
"ಕಂಡವರ ಮಾತಿಗೆ ಕಿವಿ ಕೊಡದಿರು ಲೋಕ ಅಮಲಿಗೂ ವಿಷ ಬೆರೆಸುತ್ತದೆ ನೆನಪಿಡು" ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ.
ಸಾಕಿ- ಸಕಲ ಧರ್ಮದ ಪಾರಿವಾಳ
ಮದಿರೆ- ಸಕಲ ಲೋಕದ ಅಮೃತ
ಮಧುಶಾಲೆ- ಸಕಲ ದೇವರುಗಳಿಗೆ ಸ್ವರ್ಗ
~" ಯಾರೋ ಮಧುಪಾತ್ರೆಯಲ್ಲಿ ವಿಷ ತುಂಬಿ ಹೋಗಿದ್ದರು, ಸಾಕಿ ನಗುವಿನಲ್ಲಿ ಕವಿಗಳು ವ್ಯತ್ಯಾಸ ಮರೆತುಬಿಟ್ಟರು
ದೇವರು ಮಾರಿದವನಿಗೆ ಮಾತ್ರ ಸಾವು ಬಂತು ಸಾಕಿ ನಂಬಿದವರಿಗೆ ನಾಳೆ ಸಂಜೆ ಮತ್ತೆ ಕರೆಬಂತು ಮಧುಶಾಲೆಗೆ"
~"ಅವಳು ಹಗಲ ಮುಂದೆ ಗಾಯ ಮಾಡಿದಳು ಮೊಹಬ್ಬತ್ ನ ಹೆಸರಲ್ಲಿ
ಮಧು ಬಟ್ಟಲು ತುಂಬಿ ಸಕಲ ಗಾಯ ಮರೆಸಿದಳು ಸಾಕಿ ಕತ್ತಲಲ್ಲಿ"
ಸಾಕಿ ಇಲ್ಲದ ಮಧುಶಾಲೆಯಲ್ಲಿ, ಉರಿವ ದೀಪದೊಳಗೂ ವಿರಹದ ಮೌನ ಕುಣಿಯುತ್ತದೆ; ಬಾನ ಚಂದಿರನಿಗೂ ಏಕಾಂಗಿ ವನವಾಸ; ಬೋರಲಿಟ್ಟು ಹೋದ ಬಟ್ಟಲು ಮಗ್ಗಲು ಬದಲಿಸದೆ ದುಃಖಿಸುತ್ತಿದೆ; ಗಿರಿರಾಜನ ಗಜಲ್ ಗಳು ಮೌನವಾಗುತ್ತವೆ" ಎಂದು ಒಂದು.ಕಡೆ ಸಾಕಿ ಇಲ್ಲದ ಮಧುಶಾಲೆಯನ್ನು ಲೇಖಕರು ವರ್ಣಿಸುತ್ತಾರೆ. "ಬಣ್ಣ ಯಾವುದಾದರೇನು ಮನುಷ್ಯ ಕುಲವೊಂದೇ ನೆಲದ ಅನ್ನ ಉಂಡ ಮೆಲೆ ಮಡಿ ಮೈಲಿಗೆ ಯಾಕೆ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
ಅವರು ತಮ್ಮ ಗಜಲ್ ಗಳಲ್ಲಿ ಹಲವಾರು ಉರ್ದು ಪದಗಳನ್ನು ಸಂದರ್ಭೋಚಿತವಾಗಿ ಬಳಸುತ್ತಾರೆ ಪ್ರತಿ ಪುಟಗಳಲ್ಲೂ ಅದರ ಅರ್ಥವನ್ನೂ ನೀಡಿ ಓದನ್ನು ಸುಲಭಗೊಳಿಸುತ್ತಾರೆ. ಕೆಲವೊಂದು ಆಯ್ದ ಗಜಲ್ ಗಳಿಗೆ ಆಕರ್ಷಕವಾದ ಮನ ಸೆಳೆವ ಚಿತ್ರಗಳನ್ನೂ ಜೋಡಿಸಿದ್ಧಾರೆ.. ಕೊನೆಯಲ್ಲಿ ಗಜಲ್ ನ ಸ್ವರೂಪ ಲಕ್ಷಣಗಳನ್ನೂ ನೀಡಿದ್ಧಾರೆ.
ಇವರ ಲೇಖನಿಯಿಂದ ಇನ್ನಷ್ಟು ಗಜಲ್ ಗಳು ರಚನೆಯಾಗಲಿ, ಬರವಣಿಗೆ ನಿರಂತರವಾಗಿರಲಿ ಸಹೃದಯ ಓದುಗರ ಮನ ತಟ್ಟಲಿ...
ಚೇತನಾ ಕುಂಬ್ಳೆ.
FEEDBACK: samarasasudhi@gmail.com