ಕಾಸರಗೋಡು: ಬಿರುಸಿನ ಮಳೆಗೆ ಜಿಲ್ಲೆಯಲ್ಲಿ ಈ ವರೆಗೆ 2,35,86,750 ರೂ.ನ ಕೃಷಿ ಬೆಳೆ ನಾಶವಾಗಿದೆ. ಕಳೆದ 24 ತಾಸುಗಳಲ್ಲಿ 41,86,750 ರೂ.ನ ಕೃಷಿನಾಶ ಗಣನೆ ಮಾಡಲಾಗಿದೆ. 72.18 ಹೆಕ್ಟೇರ್ ಕೃಷಿಜಾಗ ಹಾನಿಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ವರೆಗೆ 336.46706 ಹೆಕ್ಟೇರ್ ಭೂಮಿಯಲ್ಲಿ ಕೃಷಿನಾಶ ಸಂಭವಿಸಿದೆ.
ಜಿಲ್ಲೆಯಲ್ಲಿ ಈ ವರೆಗೆ ಸುರಿದುದು 1641.515 ಮಿಮೀ ಮಳೆ:
ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡ ನಂತರ ಈ ವರೆಗೆ 1641.515 ಮಿಮೀ ಮಳೆ ಲಭಿಸಲಿದೆ. ಕಳೆದ 24 ತಾಸುಗಳಲ್ಲಿ 52.4625 ಮಿಮೀ ಮಳೆ ಸುರಿದಿದೆ. ಬಿರುಸಿನಮಳೆಯ ಪರಿಣಾಮ ಈ ವರೆಗೆ 9 ಮನೆಗಳು ಪೂರ್ಣ ರೂಪದಲ್ಲಿ, 166 ಮನೆಗಳು ಭಾಗಶಃ ಹಾನಿಗೊಂಡಿವೆ.

