ಕಾಸರಗೋಡು: ಪಿ.ಎಸ್.ಸಿ. ಫೆಸಿಲಿಟೇಷನ್ ಸೆಂಟರ್ ಇಂದು(ಜು.26) ಆರಂಭಗೊಳ್ಳಲಿದೆ.
ಕೇರಳ ಲೋಕಸೇವಾ ಆಯೋಗದ ಸಹಕಾರದೊಂದಿಗೆ ಸಿವಿಲ್ ಸ್ಟೇಷನ್ ಆವರಣದಲ್ಲಿರುವ ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಈ ಸೆಂಟರ್ ಆರಂಭಿಸಲಾಗುವುದು.
ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಸಹಿತ ಉದ್ಯೋಗಾರ್ಥಿ ಯುವಜನತೆಗೆ ಲೋಕಸೇವಾ ಆಯೋಗದ ಆನ್ ಲೈನ್ ಪರೀಕ್ಷೆ ತರಬೇತಿ, ವನ್ ಟೈಂ ನೋಂದಣಿ, ಸರ್ಟಿಫಿಕೆಟ್ ಅಪ್ ಲೋಡಿಂಗ್, ಹಾಲ್ಟಿಕೆಟ್ ಡೌನ್ ಲೋಡಿಂಗ್ ಇತ್ಯಾದಿ ವಿವಿಧ ಸೇಎಗಳಕುರಿತು ಜಾಗೃತಿ ಮೂಡಿಸುವ, ವಿದ್ಯಾರ್ಥಿಗಳಿಗೆ ಪಿ.ಎಸ್.ಸಿಯ ಪರೀಕ್ಷೆ ಸಂಪ್ರದಾಯ ಕುರಿತು ಸೂಕ್ತ ಮಾಹಿತಿ ಒದಗಿಸುವ ನೂತನ ವ್ಯವಸ್ಥೆ ಈ ಪಿ.ಎಸ್.ಸಿ. ಫೆಸಿಲಿಟೇಷನ್ ಸೆಂಟರ್ ಆಗಿದೆ.
ಇಂದು (ಜು.26)ಬೆಳಗ್ಗೆ 10.30ಕ್ಕೆ ಶಾಸಕ ಎನ್.ಎ.ನೆಲ್ಲಿಕುನ್ನು ಸಂಸ್ಥೆಯನ್ನು ಉದ್ಘಾಟಿಸುವರು. ತದನಂತರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ.ಕೆ.ಸಂತೋಷ್ ಕುಮಾರ್, ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂದನನ್ ಎಂ., ಹೊಸದುರ್ಗ ಉದ್ಯೋಗ ವಿನಿಮಯ ಅಧಿಕಾರಿ ಪಿ.ಟಿ.ಜಯಪ್ರಕಾಶ್, ಉದ್ಯೋಗ ಅಧಿಕಾರಿಗಳಾದ(ಎಸ್.ಇ) ಕೆ.ಗೀತಾಕುಮಾರಿ,(ವಿ.ಜಿ.) ಎ.ಷಿಜಾ ಉಪಸ್ಥಿತರಿರುವರು. ಕೆ.ಪಿ.ಎಸ್.ಸಿ. ಸೆಕ್ಷನ್ ಅಧಿಕಾರಿ ಬಿ.ರಾಧಾಕೃಷ್ಣ ಜಾಗೃತಿ ತರಗತಿ ನಡೆಸುವರು.
ಜಾಗೃತಿ ತರಗತಿ

