ಮಂಜೇಶ್ವರ : ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ವತಿಯಿಂದ ಸಹಾಯ ಧನ ವಿತರಣೆ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ವ್ಯಾಪಾರಿ ಭವನದಲ್ಲಿ ಜರಗಿತು. ಘಟಕ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.
ಸಮಾರಮಭದಲ್ಲಿ ಜಿಲ್ಲಾಧ್ಯಕ್ಷ ಕೆ.ಅಹ್ಮದ್ ಶರೀಫ್ , ಕಾರ್ಯದರ್ಶಿ ಸಜಿ , ಪದಾಧಿಕಾರಿಗಳಾದ ಇಲ್ಯಾಸ್ , ವಿಕ್ರಂ ಪೈ ಕುಂಬಳೆ , ಸತ್ತಾರ್ ಕುಂಬಳೆ , ಬಶೀರ್ ಕನಿಲರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ವ್ಯಾಪಾರಿ ಇಬ್ರಾಹಿಂ ಮೇಲಂಗಡಿ ಅವರ ಕುಟುಂಬಕ್ಕೆ ಟ್ರೇಡರ್ಸ್ ವೆಲ್ಫೇರ್ ಸ್ಕೀಂ ನ ಚೆಕ್ಕನ್ನು ವಿತರಿಸಲಾಯಿತು. ವ್ಯಾಪಾರಿಗಳಿಗೆ ತರಕಾರಿ ಬೀಜವನ್ನೊಳಗೊಂಡ ಪ್ಯಾಕೆಟ್ ಹಸ್ತಾಂತರಿಸಲಾಯಿತು. ಸಮಾರಂಭದಲ್ಲಿ ವ್ಯಾಪಾರಿ ವರ್ಕಾಡಿ ಘಟಕದ ಅಧ್ಯಕ್ಷ ದಿವಾಕರ್.ಎಸ್.ಜೆ , ಯೂತ್ ವಿಂಗ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ , ವೆಲ್ಫೇರ್ ಸೊಸೈಟಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ , ಕಾರ್ಯದರ್ಶಿ ನಾರಾಯಣ , ಮಹಿಳಾ ವಿಂಗ್ ಅಧ್ಯಕ್ಷೆ ಕುಮುದಾ , ಹಮೀದ್ ಹೊಸಂಗಡಿ ಮೊದಲಾದವರು ಉಪಸ್ತಿತರಿದ್ದರು. ಕಾರ್ಯದರ್ಶಿ ದಯಾನಂದ ಬಂಗೇರಾ ಸ್ವಾಗತಿಸಿದರು. ಹಸೈನಾರ್ ಕುಂಜತ್ತೂರು ವಂದಿಸಿದರು.



