ಕಾಸರಗೋಡು: ಜಿಲ್ಲಾಡಳಿತೆ ವಿಶೇಷ ಚೇತನರಿಗಾಗಿ ಜಾರಿಗೊಳಿಸುವ ವಿ ಡಿಸರ್ವ್ ಯೋಜನೆಯ ಅಂಗವಾಗಿ ಜಿಲ್ಲೆಯ 335 ಮಂದಿ ವಿಶೇಷ ಚೇತನರಿಗೆ ವಿವಿಧ ಸಹಾಯ ಉಪಕರಣಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಆ.16ರಂದು ಬೆಳಗ್ಗೆ 10 ಗಂಟೆಗೆ ಪಡನ್ನಕ್ಕಡ್ ನೆಹರೂ ಆಟ್ರ್ಸ್ ಆ್ಯಂಡ್ ಸಯನ್ಸ್ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ವೀಲ್ ಚೇರ್, ಎಂ.ಆರ್.ಕಿಟ್, ಬ್ರೆಯ್ಲಿ ಕೇರ್, ಶ್ರವಣ ಸಹಾಯ ಉಪಕರಣಗಳು, ವಿವಿಧ ರೀತಿಯ ಕ್ರಚಸ್ ಇತ್ಯಾದಿ ಸಹಾಯ ಉಪಕರಣಗಳನ್ನು ವಿತರಿಸಲಾಗುವುದು. ಕೇಂದ್ರ ಸರಕಾರಿ ಸಂಸ್ಥೆ ಅಲಿಲ್ ಕೋ ನ ಸಾಮಾಜಿಕ ಬದ್ಧತೆ ನಿಧಿಯಿಂದ ಇದಕ್ಕಿರುವ ಮೊಬಲಗು ಮಂಜೂರುಮಾಡಲಾಗಿದೆ.
ಜಿಲ್ಲಾ ಆಡಳಿತೆ ವಿಶೇಷ ಚೇತನರಿಗಾಗಿ ಜಾರಿಗೊಳಿಸುವ ವೀ ಡಿಸರ್ವ್ ಯೋಜನೆಯಲ್ಲಿ 3416 ಮಂದಿಯನ್ನು ತಪಾಸಣೆ ನಡೆಸಲಾಗಿತ್ತು. ಮೊದಲ ಹಂತದಲ್ಲಿ 1433 ಮಂದಿಗೆ ಮೆಡಿಕಲ್ ಬೋರ್ಡ್ ಸರ್ಟಿಫಿಕೆಟ್ ನೀಡಲಾಗಿದೆ. ಕೇಂದ್ರ ಸರಕಾರದ ಎ.ಡಿ.ಐ.ಪಿ. ಯೋಜನೆಯ ಸಹಕಾರದೊಂದಿಗೆ ವಿ ಡಿಸರ್ವ್ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಈ ಹಿಂದೆ 48 ಮಂದಿಗೆ ಸಹಾಯ ಉಪಕರಣಗಳನ್ನು ವಿತರಿಸಲಾಗಿತ್ತು.

