ಕಾಸರಗೋಡು: ಜಿಲ್ಲಾ ಪೆÇಲೀಸ್ ಶ್ವಾನದಳದ ಬಡ್ಡಿ ಎಂಬ ಹೆಸರಿನ ನಾಯಿ ಚಿನ್ನದ ಪದಕ ಗೆದ್ದು ನಾಡಿಗೆ ಹಿರಿಮೆ ತಂದಿದೆ. ಉತ್ತರ ಪ್ರದೇಶದ ಲಕ್‍ನೌನಲ್ಲಿ ನಡೆದ 62ನೇ ರಾಷ್ಟ್ರೀಯ ಪೆÇಲೀಸ್ ಡ್ಯೂಟಿ ಮೀಟ್‍ನಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಿದ ಈ ಪೆÇಲೀಸ್ ಶ್ವಾನ ಚಿನ್ನದ ಪದಕಕ್ಕೆ ಭಾಜನವಾಗಿದೆ.
ರಾಜ್ಯದ ಇತಿಹಾಸದಲ್ಲೇ ಪ್ರಥಮಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಎಕ್ಸ್‍ಪೆÇ್ಲೀಸಿವ್ ಸ್ನಿಫರ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಲಾಗಿದೆ. ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ನಡೆದ ಪೆÇಲೀಸ್ ಡ್ಯೂಟಿ ಮೀಟ್‍ನಲ್ಲಿ ಚಿನ್ನದ ಪದಕ ಮತ್ತು ಈ ವರ್ಷದ ಮೀಟ್‍ನಲ್ಲಿ ಬೆಳ್ಳಿಪದಕವನ್ನು ಬಡ್ಡಿ ಪಡೆದಿತ್ತು. 2015ರಲ್ಲಿ ತ್ರಿಶೂರು ಪೆÇಲೀಸ್ ಅಕಾಡೆಮಿಯಲ್ಲಿ ಬಡ್ಡಿಗೆ ತರಬೇತು ನೀಡಲಾಗಿತ್ತು. ಅಜೇಷ್ ಕೆ. ಮತ್ತು ಮನು ಪಿ. ಚೆರಿಯಾನ್ ಈ ನಾಯಿಯ ಪರಿಪಾಲಕರಾಗಿದ್ದಾರೆ.
ಮೀಟ್‍ನಲ್ಲಿ ಟ್ರಕ್ಕರ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಕಾಸರಗೋಡು ಬಳಗದ ಶ್ವಾನ ರೂನಿ 7ನೇ ಸ್ಥಾನ ಪಡೆದಿದೆ. ಈ ವರ್ಷದ ರಾಜ್ಯ ಮಟ್ಟದ ಮೀಟ್‍ನಲ್ಲಿ ಈ ನಾಯಿ ಬೆಳ್ಳಿಪದಕ ಗಳಿಸಿತ್ತು. ರಂಜಿತ್ ಎಸ್., ಪ್ರಜೇಷ್ ಆರ್. ರೂನಿಯ ಪರಿಪಾಲಕರಾಗಿದ್ದಾರೆ. ಭಾರತದಲ್ಲೇ ಆರ್ಮಿ, ಬಿ.ಎಸ್.ಎಫ್., ಐ.ಟಿ.ಬಿ.ಪಿ. ಸಹಿತ ತಂಡಗಳ ಶ್ವಾನಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದುವು.


