HEALTH TIPS

ಜಲಸಂರಕ್ಷಣೆಯಲ್ಲಿ ಗಮನ ಸೆಳೆಯುತ್ತಿರುವ ಮಡಿಕೈ ಗ್ರಾಮ ಪಂಚಾಯತಿ- ನಿರ್ಮಾಣಗೊಂಡಿದೆ 38 ಸಾವಿರಕ್ಕೂ ಅಧಿಕ ಮಳೆನೀರು ಇಂಗು ಗುಂಡಿಗಳು

             
    ಕಾಸರಗೋಡು:  ಮಳೆಗಾಲದಲ್ಲಿ ಜಲಸಂರಕ್ಷಣೆ ನಡೆಸುವ ಮೂಲಕ ಭೂಗರ್ಭಜಲ ಮಟ್ಟ ಹೆಚ್ಚಿಸುವ ಮತ್ತು ಕುಡಿಯುವ ನಿರಿನ ಕ್ಷಾಮ ಪರಿಹಾರ ನಡೆಸುವ ನಿಟ್ಟಿನಲ್ಲಿ 38ಸಾವಿರಕ್ಕೂ ಅಧಿಕ ಮಳೆನೀರ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಮಡಿಕೈ ಗ್ರಾಮ ಪಂಚಾಯತ್ ಗಮನ ಸೆಳೆದಿದೆ. 
     ಅತ್ಯಂತ ಕಡಿಮೆ ವೆಚ್ಚದಲ್ಲಿ ಮಳೆನೀರನ್ನು ಭೂಮಿಯಡಿಗೆ ತಲಪಿಸುವ ರೀತಿಯಲ್ಲಿ ಈ ಇಂಗುಗುಂಡಿಗಳು ಪರಿಪೂರ್ಣವಾಗಿವೆ. ಮಡಿಕೈ ಗ್ರಾಮಪಂಚಾಯತ್ ನ 15 ವಾರ್ಡ್ ಗಳಲ್ಲಿ 38 ಸಾವಿರಕ್ಕೂ ಅಧಿಕ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಒಂದು ವಾರ್ಡ್ ನಲ್ಲಿ 500ಕ್ಕೂ ಅಧಿಕ ಮಳೆನೀರು ಇಂಗುಗುಂಡಿಗಳನ್ನು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ನೌಕರಿಖಾತರಿ ಯೋಜನೆ ಪ್ರಕಾರ ನಿರ್ಮಾಣ ನಡೆಸಲಗಿದೆ. ಒಂದೂವರೆ ಮೀಟರ್ ಉದ್ದ, 60 ಸೆ.ಮೀ. ಅಗಲ, 60 ಸೆ.ಮೀಮ ಆಳದಲ್ಲಿ ಗುಳಿಗಳು ಸಿದ್ಧವಾಗಿವೆ.
     ಮಳೆನೀರ ಗುಂಡಿಗಳಲ್ಲದೆ ತೆಂಗಿನನಾರಿನ ಗುಂಡಿಗಳನ್ನೂ ಮಡಿಕೈ ಗ್ರಾಮ ಪಂಚಾಯತ್ ನನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ತೆಂಗಿನ ಮರದ ಬುಡದಲ್ಲಿ  ಸುತ್ತಲೂ ಗುಳಿಗಳನ್ನು ನಿರ್ಮಿಸಿ, ಅದರಲ್ಲಿ ತೆಂಗಿನನಾರು ತುಬಿಸಿ, ಮಳೆಯನೀರು ಮಣ್ಣಲ್ಲಿ ಇಂಗುವಂತೆ ಮಾಡುವುದು ಇಲ್ಲಿನ ವಿಧಾನ.
      ಇವುಗಳ ಜೊತೆಗೆ ನೂತನವಾಗಿ 6 ಕೆರೆಗಳು, 6 ಬಾವಿಗಳನ್ನು ನಿರ್ಮಿಸಲಾಗಿದೆ. 29 ತೋಡುಗಳ ನವೀಕರಣನಡೆಸಲಾಗಿದೆ. ಪ್ರತಿ ವಾರ್ಡ್ ನ 60ಕ್ಕೂ ಅಧಿಕ ಮನೆಗಳಲ್ಲಿಬಾವಿಗಳನನು ರೀಚಾರ್ಜ್ ನಡೆಸಲಾಗಿದೆ. ಜೊತೆಗೆ ತೀಯರ್ ಸೇತುವೆಯ ಪುನರ್ ನಿರ್ಮಾಣ, ತಡೆಗೋಡೆ ನಿರ್ಮಾಣನಡೆಸಲಾಗಿದೆ. 5ಕ್ಕೂ ಅಧಿಕ ಕರೆಗಳನವರಣ ನಡೆಸಲಾಗಿದೆ. ಪಂಚಾಯತ್ ಅಲ್ಲದೆ ಜಲಪ್ರಾಧಿಕಾರ, ಕಿರು ನೀರಾವರಿ ಇಲಾಖೆ, ನೌಕರಿ ಖಾತರಿ ಯೋಜನೆ, ಕುಟುಂಬಶ್ರೀ ಗಳ ಸಹಕಾರದೊಂದಿಗೆ ವಿವಿಧ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಲಾಗುತ್ತಿದೆ.
      ಜಲಸಂರಕ್ಷಣೆ ಸಂಬಂಧ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಮಳೆಗಾಲವಾಗಿದ್ದರೂ, ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಮಳೆ ಬಹಳ ಕಡಿಮೆಯಾಗಿರುವ ಮತ್ತುಬಿರುಸಿನ ಬಿಸಿಲು ಇರುವ ಹಿನ್ನೆಲೆಯಲ್ಲಿ ತೀವ್ರತರ ಕುಡಿಯುವ ನೀರಿನಬರ ತಲೆದೋರಿದೆ. ಇವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಫಲದಾಯಕವಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries