HEALTH TIPS

ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ: ಜಿಲ್ಲೆಯಲ್ಲಿ 109915 ಮಂದಿಯ ಸೇರ್ಪಡೆ

     

         ಕಾಸರಗೋಡು:   ಕೇಂದ್ರ-ರಾಜ್ಯ ಸರಕಾರಗಳು ಜಂಟಿಯಾಗಿ ಜಾರಿಗೊಳಿಸುತ್ತಿರುವ ಉಚಿತ ಆರೋಗ್ಯ ಚಿಕಿತ್ಸಾ ಯೋಜನೆಯಾಗಿರುವ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ(ಎ.ಬಿ.ಕೆ.ಎ.ಎಸ್.ಪಿ.)ಯಲ್ಲಿ ಜಿಲ್ಲೆಯಲ್ಲಿ ಈ ವರೆಗೆ 70518 ಕುಟುಂಬಗಳ 109915 ಮಂದಿ ಸದಸ್ಯತನ ಪಡೆದಿದ್ದಾರೆ. 
        ಮೊದಲ ಹಂತದ ನೋಂದಣಿ ಮೂಲಕ ಜಿಲ್ಲೆಯ ಎಲ್ಲ ಪಂಚಾಯತ್  ಮಟ್ಟದಲ್ಲೂ ನಗರಸಭೆಗಳಲ್ಲೂ ಶೇ 70 ಕುಟುಂಬ ಸದಸ್ಯತನ ವಿತರಣೆ ಪೂರ್ಣಗೊಂಡಿದೆ ಎಂದು ಚಿಯಾಕ್ ಜಿಲ್ಲಾ ಯೋಜನೆ ಮೆನೆಜರ್ ತಿಳಿಸಿದರು. ವಿವಿಧ ಪಂಚಾಯತ್-ನಗರಸಭೆ ಕೇಂದ್ರಗಳಲ್ಲಿ ಕಾರ್ಡ್ ವಿತರಣೆ ಪ್ರಗತಿಯಲ್ಲಿದೆ.
        ಈ ವರ್ಷ ಏ.1ರಿಂದ ರಾಜ್ಯದಲ್ಲಿ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಜಾರಿಗೊಳಿಸಲಾಗುತ್ತಿದೆ. 2019 ಮಾ.31 ವರೆಗೆ ರಾಜ್ಯದಲ್ಲಿಜಾರಿಯಲ್ಲಿದ್ದ ಆರ್.ಎಸ್,ಬಿ.ವೈ.-ಚಿಸ್ ಯೋಜನೆ(ಸಮಗ್ರ ಆರೋಗ್ಯ ವಿಮೆ ಯೋಜನೆ), ಚಿಸ್ ಪ್ಲಸ್ ಯೋಜನೆ, ಇತರ ವಿವಿಧ ಚಿಕಿತ್ಸೆ ಯೋಜನೆಗಳು ಇತ್ಯಾದಿಗಳನನು ವಿಈನಗೊಳಿಸಿ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆ ಮುಖಾಂತರ ಸದಸ್ಯರಾಗುವ ಕುಟುಂಬಕ್ಕೆ 5 ಲಕ್ಷ ರೂ. ನ ಉಚಿತ ಚಿಕಿತ್ಸೆ ಸೌಲಭ್ಯ ಲಭಿಸಲಿದೆ. ಸದಸ್ಯರಾದವರಿಗೆ ವಿವಿಧ ಸರಕಾರಿ-ಖಾಸಗಿ-ಸಹಕಾರಿ ಆಸ್ಪತ್ರೆಗಳಲ್ಲಿ (ಮೆಡಿಕಲ್ ಕಾಲೇಜುಗಳ ಸಹಿತ) ಚಿಕಿತ್ಸಾ ಸೌಲಭ್ಯಗಳು ಲಭಿಸಲಿವೆ.
         2019 ಮಾ.31ವರೆಗೆ ಕಾಲಾವಧಿ ಹೊಂದಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಪಡೆದುಕೊಂಡಿರುವ ಕುಟುಂಗಳಿಗೆ 2011ರ ಸಾಮಾಜಿಕ-ಆರ್ಥಿಕ ಜಾತಿಗಣತಿ ಪ್ರಕಾರ ಆಯ್ದ ಕುಟುಂಬಗಳಿಗೆ (ಪ್ರಧಾನಿ ಅವರ ಪತ್ರ ಲಭಿಸಿರುವ ಕುಟುಂಬಗಳಿಗೆ) ಯೋಜನೆಯಲ್ಲಿ ಸೇರಲು ಅರ್ಹರಾಗಿದ್ದಾರೆ. ಯೋಜನೆಗೆ ನೂತನ ಅರ್ಜಿಗಳನ್ನು ಸ್ವೀಕರಿಸುವ ಸಂಬಂಧ ಮಾಹಿತಿಗಳನ್ನು ನಂತರ ತಿಳಿಸಲಾಗುವುದು.
        ಅರ್ಹತಾ ಕುಟುಂಬಗಳ ಪಡಿತರ ಚೀಟಿಯಲ್ಲಿ ಸೇರಿರುವ ಎಲ್ಲ ಸದಸ್ಯರು ಈ ಚಿಕಿತ್ಸಾ ಕಾರ್ಡ್ ಪಡೆದುಕೊಳ್ಳಬಹುದು. ಒಂದು ಕುಟುಂಬದ, ಯೋಜನೆಯಲ್ಲಿ ಸೇರಿರುವವರ ಸಂಖ್ಯೆ ಮತ್ತು ಪ್ರಾಯಕ್ಕೆ ಮಿತಿಯಿಲ್ಲ. ಎಲ್ಲ ಸದಸ್ಯರಿಗೂ ಒಂದೊಂದು ಕಾರ್ಡ್ ಲಭಿಸಲಿದೆ. ಕುಟುಂಬದ ಒಬ್ಬ ಸದಸ್ಯ ಕಾರ್ಡ್ ಪಡೆದರೆ ಉಳಿದ ಸದಸ್ಯರು ಯಾವಾಗಬೇಕಿದ್ದರೂ ಕಾರ್ಡ್ ಪಡೆದುಕೊಳ್ಳುವ ಅವಕಶಗಳಿವೆ. ಪ್ರತಿ ಕುಟುಂಬಕ್ಕೆ 50 ರೂ.ನೋಂದಣಿ ಶುಲ್ಕ ಸ್ಲಿಸಬೇಕು. ಕುಟುಂಬದ ಇತರ ಸದಸ್ಯರನ್ನು ನಂತರ ಸೇರ್ಪಡೆಗೊಳಿಸಲು ಬೇರೆ ಮೊಬಲಗು ನೀಡಬೇಕಿಲ್ಲ. ಪಂಚಾಯತ್,ನಗರಸಭೆ ಮಟ್ಟದಲ್ಲಿ ಚಟುವಟಿಕೆ ನಡೆಸುತ್ತಿರುವ ಕಾರ್ಡ್ ವಿತರಣೆ ಕೇಂದ್ರದಲ್ಲಿ 2018-19 ವರ್ಷ ಕಾಲಾವಧಿ ಹೊಂದಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಪ್ರಧಾನಮಂತ್ರಿಯ ಪತ್ರ,ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲೆಗಳನ್ನು ನೇರವಾಗಿ ಸಲ್ಲಿಸಬೇಕು. ಪಂಚಾಯತ್,ನಗರಸಭೆ ಕಾರ್ಡ್ ವಿತರಣೆ ಕೇಂದ್ರಗಳಾಗಿದ್ದಲ್ಲಿ ಆಯಾ ಕುಟುಂಬಶ್ರೀ ಕಚೇರಿಯನ್ನು ಸಂಪರ್ಕಿಸಬೇಕು. ಮಾಹಿತಿಗೆ ಟೋಲ್ ಫ್ರೀ ನಂಬ್ರ:1800 200 2530.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries