HEALTH TIPS

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸ್ವರ್ಗದಿಂದ ಬರಲ್ಲ- ಪ್ರಣಬ್ ಮುಖರ್ಜಿ

       
    ನವದೆಹಲಿ: ಯೋಜಿತ ಆರ್ಥಿಕತೆಯಲ್ಲಿ ದಿಟ್ಟ ನಂಬಿಕೆ ಹೊಂದಿದ್ದ ನಮ್ಮ ರಾಷ್ಟ್ರ ನಿರ್ಮಾತೃಗಳು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
        ಕನ್ಸಿಟಿಟ್ಯೂಷನ್ ಕ್ಲಬ್ ನ ಮಾವಳಂಕರ್ ಹಾಲ್ ನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    55 ವರ್ಷಗಳಿಂದ ಕಾಂಗ್ರೆಸ್ ದೇಶವನ್ನು ನಿರ್ಲಕ್ಷಿಸಿತು ಎಂದು ಟೀಕಿಸುವವರಿಗೆ  ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ  ದೇಶ ಸ್ವಾತಂತ್ರ್ಯ ಪಡೆಯಿತು ಎಂಬುದು ತಿಳಿಯಬೇಕಾಗಿದೆ. ಇತರ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಯೋಜಿತ ಆರ್ಥಿಕತೆಯಲ್ಲಿ ದಿಟ್ಟ ನಂಬಿಕೆ ಹೊಂದಿದ್ದ ನಮ್ಮ ರಾಷ್ಟ್ರ ನಿರ್ಮಾತೃಗಳು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ ಎಂದರು.
      ಭವಿಷ್ಯದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆಯಾಗಲು ಜವಹರ್ ಲಾಲ್ ನೆಹರೂ, ಮನಮೋಹನ್ ಸಿಂಗ್, ನರಸಿಂಹ ರಾವ್ ಸೇರಿದಂತೆ ಹಿಂದಿನ ಸರ್ಕಾರಗಳು ಅಡಿಗಾಲು ಹಾಕಿವೆ ಎಂದು ತಿಳಿಸಿದರು. 2024ರೊಳಗೆ ದೇಶದ ಆರ್ಥಿಕತೆ 5 ಟ್ರಿಲಿಯನ್ ನಷ್ಟುಆಗಲಿದೆ ಎಂದು ವಿತ್ತ ಸಚಿವರು ಬಜೆಟ್ ಮಂಡನೆ ವೇಳೆ ಹೇಳಿದ್ದರು. ಇದು ಸ್ವಗದಿಂದ ಇಳಿಯುವುದಿಲ್ಲ ಬ್ರಿಟಿಷರು ಮಾತ್ರವಲ್ಲದೇ ಸ್ವಾತಂತ್ರ್ಯ ನಂತರದ ಭಾರತೀಯರು ಸೂಕ್ತ ಅಡಿಪಾಯ ಹಾಕಿದ್ದಾರೆ ಎಂದರು.
    ಜವಹರ್ ಲಾಲ್ ನೆಹರು ಮತ್ತಿತರಿಂದ ಐಐಟಿಗಳು, ಇಸ್ರೋ, ಐಐಎಂಗಳು, ಬ್ಯಾಂಕಿಂಗ್ ಜಾಲ ಇತ್ತಾದಿ ವಿಸ್ತೃತಗೊಂಡಿತ್ತು. ಇದನ್ನು ಡಾ. ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್  ಉದಾರವಾದಿ ಆರ್ಥಿಕತೆಯಲ್ಲಿ ಅಭಿವೃದ್ಧಿಪಡಿಸಿದರು. ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಆಗಲು ಇದು ಪ್ರಮುಖ ಅಡಿಪಾಯ ಆಗಿದೆ ಎಂದು ಪ್ರಣಬ್ ಮುಖರ್ಜಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries