HEALTH TIPS

ಖ್ಯಾತ ಜನಪ್ರಿಯ ಆ ಪ್ ಟಿಕ್-ಟಾಕ್, ಹೆಲೋ ಮೇಲೆ ಮತ್ತೆ ನಿಷೇಧ..? ಕೇಂದ್ರ ಸರ್ಕಾರ ಹೇಳಿದ್ದೇನು?


       ನವದೆಹಲಿ: ಯುವ ಪೀಳಿಗೆಯ ಆಕರ್ಷಿಸಿರುವ ಖ್ಯಾತ ಸಾಮಾಜಿಕ ಜಾಲತಾಣ ಆ ಪ್ ಗಳಾದ ಟಿಕ್ ಟಾಕ್ ಮತ್ತು ಹೆಲೋ ಆ ಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸುವ ಚಿಂತನೆಯಲ್ಲಿ ತೊಡಗಿದೆಯೇ.. ಹೌದು ಎನ್ನುತ್ತಿವೆ ಮೂಲಗಳು..
    ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಜನಪ್ರಿಯ ಆ ಪ್ ಗಳನ್ನು ನಿಷೇಧಿಸುವ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಎರಡೂ ಆ ಪ್ ಗಳಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಈ ವರೆಗೂ ಈ ಸಂಸ್ಥೆಗಳಿಂದ ಇದಕ್ಕೆ ಉತ್ತರ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಎರಡೂ ಆಪ್ ನ ಆಡಳಿತ ಸಂಸ್ಥೆಯಗಳ ವಿರುದ್ಧ ತೀವ್ರ ಗರಂ ಆಗಿದೆ.
     ಟಿಕ್ ಟಾಕ್ ಮತ್ತು ಹೆಲೋ ಆಡಳಿತ ಮಂಡಳಿಗಳಿಗೆ ಕೇಂದ್ರ ಸರ್ಕಾರವು 21 ಪ್ರಶ್ನೆಗಳಿಗೆ ಉತ್ತರ ಕೇಳಿ ನೋಟಿಸ್ ನೀಡಿದೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ ಇವುಗಳನ್ನು ನಿಷೇಧಿಸುವುದಾಗಿ ಎಚ್ಚರಿಕೆ ಕೂಡ ನೀಡಿದೆ ಎನ್ನಲಾಗಿದೆ.
       ರಾಷ್ಟ್ರೀಯ ಸೇವಕ ಸಂಘದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ್ ಈ ಎರಡು ಅಪ್ಲಿಕೇಷನ್ ಗಳು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ ಎಂದು ಆರೋಪಿಸಿ ಪ್ರಧಾನಿ ಕಾರ್ಯಾಲಯಕ್ಕೆ ಈ ಹಿಂದೆ ದೂರು ಸಲ್ಲಿಸಿತ್ತು. ಹೀಗಾಗಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರ ಜ್ಞಾ ನ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಿಈ ಸಂಸ್ಥೆಗಳಿಗೆ 21 ಪ್ರಶ್ನೆಗಳಿಗೆ ಉತ್ತರ ಬಯಸಿ ನೋಟಿಸ್ ನೀಡಿದೆ.
     ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ 11 ಸಾವಿರಕ್ಕೂ ಅಧಿಕ ತಿರುಚಿದ ರಾಜಕೀಯ ಜಾಹೀರಾತು ಪ್ರಸಾರದಿಂದ ಭಾರಿ ಮೊತ್ತದ ಹಣ ಪಾವತಿಯಾಗಿದೆ ಎಂಬ ಆರೋಪದ ಮೇಲೆ ತೆರಿಗೆ ಸಚಿವಾಲಯ ಹೆಲೊನಿಂದ ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries