ಬದಿಯಡ್ಕ: ಬದಿಯಡ್ಕ ಗ್ರಾ.ಪಂ.ಮತ್ತು ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ ಕುಟುಂಬಶ್ರೀಯ ಭತ್ತ ಬೆಳೆ ಸಂರಕ್ಷಣಾ ಯಜ್ಞ 2019 ಕಾರ್ಯಯೋಜನೆಯ ಭಾಗವಾಗಿ ಜು.6 ರಂದು ಶನಿವಾರ ಮಾನ್ಯ ದೇವರಕೆರೆ ಭತ್ತ ಸಮಿತಿ(ಪಾಡಶೇಖರ)ಯಲ್ಲಿ ಮಳೆ-ಬೆಳೆ ಮಹೋತ್ಸವ ಆಯೋಜಿಸಲಾಗಿದೆ.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 9.30 ರಿಂದ ಆರಂಭಗೊಳ್ಳುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಕುಟುಂಬಶ್ರೀ ಜಿಲ್ಲಾ ಮಿಶನ್ ಸಂಯೋಜಕ ಟಿ.ಟಿ.ಸುರೇಂದ್ರನ್, ಕಾಸರಗೋಡು ಬ್ಲಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್, ಬದಿಯಡ್ಕ ಗ್ರಾ.ಪಂ.ಉಪಾಧ್ಯಕ್ಷೆ ಝೈಬುನ್ನಿಸ, ಗ್ರಾ.ಪಂ.ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ಕ್ಷೇಮಕಾರ್ಯ ಸಮಿತಿ ಅಧ್ಯಕ್ಷೆ ಶಬಾನ, ಸದಸ್ಯರಾದ ಶಂಕರ ಡಿ., ಮುನೀರ್,ಜಯಶ್ರೀ, ಮುಹಮ್ಮದ್ ಸಿರಾಜ್, ರಾಜೇಶ್ವರಿ, ಪ್ರೇಮಾಕುಮಾರಿ, ಅನಿತ ಕ್ರಾಸ್ತಾ, ಗ್ರಾ.ಪಂ.ಕಾರ್ಯದರ್ಶಿ ಶೈಲೇಂದ್ರನ್, ಸಹಾಯಕ ಕಾರ್ಯದರ್ಶಿ ಸುನಿಲ್ ಕುಮಾರ್ ಎಸ್., ಸವಿತ ಎಂ.ಪಿ., ಖಾದರ್ ಮಾನ್ಯ, ಸರೋಜಿನಿ ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭ ಪ್ರಗತಿಪರ ಕೃಷಿಕರಾದ ಧರ್ಮಪಾಲ ಮಾನ್ಯ, ಪರಮೇಶ್ವರಿ ಮೇಗಿನಡ್ಕ, ಬೆಂಜಮಿನ್ ಡಿಸೋಜ ಕಾರ್ಮಾರು, ಪಿ.ಕೆ.ಶಾಫಿ ಮಾನ್ಯ ಅವರನ್ನು ಸನ್ಮಾನಿಸಲಾಗುವುದು. ಅಪರಾಹ್ನ 3ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಶ್ಯಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಬಹುಮಾನಗಳನ್ನು ವಿತರಿಸುವರು. ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಗ್ರಾಮೀಣ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.


