ಕಾಸರಗೋಡು: ರಾಜ್ಯ ಬೆಳೆ ವಿಮೆ ಯೋಜನೆಯ ಎರಡು ವಾರಗಳ ಚಟುವಟಿಕೆಗಳು ಆರಂಭಗೊಂಡಿವೆ.
ತೆಂಗು, ಅಡಕೆ, ಬಾಳೆ,ಕಾಳುಮೆಣಸು, ತರಕಾರಿ ಸಹಿತ 25 ವಿಧದ ಬೆಳೆಗಳ ಕೃಷಿಗೆ ಈ ಯೋಜನೆ ಪ್ರಕಾರ ಆರ್ಥಿಕ ನಷ್ಟ ಪರಿಹಾರ ಲಭಿಸಿದೆ.
ಒಂದು ರೂ.ನಿಂದ ವಾರ್ಷಿಕ ಪ್ರೀಮಿಯಂ ಯೋಜನೆಯಲ್ಲಿ ಸೇರುವವರಿಗೆ ಹೆಕ್ಟೇರ್ ಗೆ 40 ಸಾವಿರ ರೂ. ವರೆಗೆ ನಷ್ಟ ಪರಿಹಾರಕ್ಕೆ ಅರ್ಹವಾಗುತ್ತದೆ. ಬರ, ನೆರೆ, ಮಣ್ಣು ಕುಸಿತ, ಕಡಲ್ಕೊರೆತ, ಸಿಡಿಲು, ಸುಂಟರಗಾಳಿ, ಕಾಡುಮೃಗಗಳ ಹಾವಳಿ ಇತ್ಯಾದಿಗಳಿಗೂ ನಷ್ಟ ಪರಿಹಾರ ಲಭಿಸಲಿದೆ. ಸದಸ್ಯರಾಗಲು ಆಸಕ್ತ ಕಾಸರಗೋಡು ನಗರಸಭೆ ವ್ಯಾಪ್ತಿಯ ಕೃಷಿಕರು ನಿಗದಿತ ಪ್ರೀಮಿಯಂ ಮತ್ತು ಜಾಗದ ಶುಲ್ಕ ರಶೀದಿಯ ನಕಲು ಸಹಿತ ಕಾಸರಗೋಡು ಕೃಷಿಭವನದಲ್ಲಿ ಅರ್ಜಿ ಸಲ್ಲಿಸಬೇಕು. ದೂರವಾಣಿ: 9383472310.

