ಕಾಸರಗೋಡು: ಜಿಲ್ಲೆಯ ವಿವಿಧ ಕುಟುಂಬಶ್ರೀ ಘಟಕಗಳ ಆಹಾರ-ಆಹಾರೇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಗೊಂಡಿದೆ.
ಬಡ್ಸ್ ಶಾಲೆಗಳಮಕ್ಕಳು ಮತ್ತು ಅವರ ತಾಯಂದಿರು ಸಿದ್ಧಪಡಿಸಿದ ಉತ್ಪನ್ನಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಗೊಳ್ಳುತ್ತಿವೆ.
ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಮೇಳ ಜರುಗುತ್ತಿದ್ದು,ಜು.6 ವರೆಗೆ ನಡೆಯಲಿದೆ. ಕುಟುಮಬಶ್ರೀ ಘಟಕಗಳುತ್ಪ್ನಗಳಲ್ಲದೆ, ಸಫಲಂ ಗೇರುಬೀಜ, ಗ್ರಾಮಕಿರಣಂ, ಎಲ್.ಇ.ಡಿ.ಬಲ್ಬ್ ಗಳು, ಅರಿಶ್ರೀ ಅಕ್ಕಿ, ಬ್ಲೋಸಂ ಕ್ರೀಡಾ ಉಡುಪುಗಳು ಇತ್ಯಾದಿಗಳು ಮಾರಾಟಗೊಳ್ಳುತ್ತಿವೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮೇಳ ಉದ್ಘಾಟಿಸಿದರು. ಕಾ?ಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಹೆಚ್ಚುವರಿ ದಂಡನಾಧಿಕಾರಿ ಹರಿದಾಸನ್ ಸಿ., ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಮೊದಲಾದವರು ಉಪಸ್ಥಿತರಿದ್ದರು.

