ಬದಿಯಡ್ಕ: ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಬದಿಯಡ್ಕ ಇದರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಕಾರ್ಯಕ್ರಮದ 8ನೇ ಕಾರ್ಯಕ್ರಮ ಇಂದು ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಅಪರಾಹ್ನ 3 ರಿಂದ ನಡೆಯಲಿದೆ.
ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಪುರುಷ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಮಹಾಲಿಂಗ ಚೆಟ್ಟಿಯಾರ್ ಬದಿಯಡ್ಕ ಅವರನ್ನು ಸನ್ಮಾನಿಸಲಾಗುವುದು. ಮೂಲಡ್ಕ ನಾರಾಯಣ ಅವರು ಅಭಿನಂದನಾ ಭಾಷಣ ಮಾಡುವರು. ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ರವಿಕಾಂತ ಕೇಸರಿ ಕಡಾರು,ಮೊಹಮ್ಮದಾಲಿ ಪೆರ್ಲ ಮೊದಲಾದವರು ನೇತೃತ್ವ ನೀಡುವರು.

