ಮಂಜೇಶ್ವರ: ಪಾವೂರು ಗೇರುಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಡಾನ್ ಬೋಸ್ಕೋ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಬುಧವಾರ ಲೋಕಾರ್ಪಣೆ ಗೊಂಡಿತು.
ಮಂಗಳೂರು ಬಿಷಪ್ ವಂದನೀಯ ಗುರು ಪೀಟರ್ ಪೌಲ್ ಸಾಲ್ದಾನ ಅವರು ಸಮಾರಂಭದಲ್ಲಿ ಆಶೀರ್ವಚನ ನೀಡಿ ಅನುಗ್ರಹಿಸಿದರು. ವಂದನೀಯ ಗುರು ಜೋಯ್ಸೆ ತೋನಿಕುಝಿುಲ್ ಎಸ್.ಡಿ.ಬಿ. ಬೆಂಗಳೂರು ಅವರು ನೂತನ ಕಟ್ಟಡವನ್ನು ರಿಬ್ಬನ್ ಕತ್ತರಿಸಿ ಲೋಕಾರ್ಪಣೆಗೈದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ವಂದನೀಯ ಗುರು ಪೀಟರ್ ಪೌಲ್ ಸಾಲ್ದಾನ, ಗುರು ಜೋಯ್ಸೆ ತೋಣಿಕುಝಿುಲ್, ಗುರು ಇಕನೋಮರ್ ಪಿ. ಎಸ್.ಜೋರ್ಜ್ ಮೊದಲಾದವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಫಾದರ್ ಸನ್ನಿ, ಗುತ್ತಿಗೆದಾರ ಬಿಜು, ಸಿಸ್ಟರ್ ಝೀಟಾ, ಫಾದರ್ ವಿನ್ಸೆಂಟ್, ಫಾದರ್ ಆಂಟನಿ ವೈಲಟ್, ಫಾದರ್ ಅಲೋಶಿಯಸ್ ಸಾಂಟಿಯಾಗೊ, ಫಾದರ್ ಜೈಸನ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಪ್ರಬಂಧಕ ಮೈಕಲ್ ಪ್ರಾಸ್ತಾವಿಕ ಭಾಷಣಗೈದರು. ಶಾಲಾ ಮುಖ್ಯೋಪಾಧ್ಯಾಯ ಫಾದರ್ ಅಗಸ್ಟಿನ್ ತೆಕ್ಕೇಪೂಕೊಂಬಿಲ್ ಸ್ವಾಗತಿಸಿ, ವಂದಿಸಿದರು.
ಬಳಿಕ ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳ ವಿವಿಧ ನೃತ್ಯ ವೈಭವ ಸಹಿತ ಮನ ರಂಜಿಸಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಶಾಲಾ ಸಿಬ್ಬಂದಿಗಳು, ಪೆÇೀಷಕರು ಊರವರು ಸಹಿತ ಹಲವಾರು ಮಂದಿ ಪಾಲ್ಗೊಂಡರು.


