ಮಂಜೇಶ್ವರ: ಮಂಜೇಶ್ವರದ ಬಾವುಟಮೂಲೆ ಜಯಂತಿ ರಾವ್ ರಚಿಸಿದ ಭಕ್ತಿ ಸುಧಾ ಭಜನಾ ಹಾಡುಗಳ ಸಂಕಲನವನ್ನು ಇತ್ತೀಚೆಗೆ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಮುಖಂಡರಾದ ಅರವಿಂದಕುಮಾರ್ ಎನ್ ಕೆ ಬಿಡುಗಡೆ ಮಾಡಿದರು.
ಮಂಜೇಶ್ವರ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಂಬಾರು ಲಕ್ಷ್ಮೀಶ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಅನಸೂಯ ರಾವ್, ಸುನೀತಾ ಬೈಪಾಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ಜಯರಾಮ ಪದಕಣ್ಣಾಯ, ಚಿದಾನಂದ ಕೆದಿಲಾಯ, ಸತ್ಯನಾರಾಯಣ ತಂತ್ರಿ, ಮುರಳೀಧರ ಬಳ್ಳಕ್ಕುರಾಯ ಮೊದಲಾದವರು ಭಾಗವಹಿಸಿದ್ದರು. ವೇಂಕಟೇಶ ಕಲ್ಯಾಣಿತ್ತಾಯ ಸ್ವಾಗತಿಸಿ, ನಾಗರಾಜ ಪದಕಣ್ಣಾಯ ವಂದಿಸಿದರು. ಈ ಕೃತಿಯಲ್ಲಿ ಸುಮಾರು 37 ಭಜನೆಗಳಿದ್ದು, ಕೃತಿಗೆ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಮುನ್ನುಡಿ ಬರೆದಿದ್ದಾರೆ.


