ಪೆರ್ಲ: ಕರಾವಳಿಯ ಭಜನಾ ಚರಿತ್ರೆಯಲ್ಲೇ ಪ್ರಪ್ರಥಮವಾಗಿ ಭಜನೆಯ ಅಭ್ಯುದಯ ಮತ್ತು ದಾಸ ಸಾಹಿತ್ಯ ಪ್ರಚಾರಾಂದೋಲನದ ಭಾಗವಾಗಿ ಭಜನಾ ಟ್ರಸ್ಟ್ ಅಸ್ತಿತ್ವಕ್ಕೆ ಬರುತ್ತಿದೆ. 'ಜೀವನೋದ್ಧಾರಕ್ಕೆ ಭಜಿಸಬೇಕು ಮನವೇ' ಎಂಬ ಆಶಯದಂತೆ ದಾಸಸಾಹಿತ್ಯ ಕೈಂಕರ್ಯದಲ್ಲಿ ತನ್ನನ್ನು ತಾನೇ ಸಮರ್ಪಿಸಿಕೊಂಡು, ಅರ್ಪಣೆಯಿಂದ ದುಡಿದ ಸಂಕೀರ್ತನಾಗ್ರೇಸರ ರಾಮಕೃಷ್ಣ ಕಾಟುಕುಕ್ಕೆ ಅವರು ತನ್ನ ಶಿಷ್ಯ ಮಂಡಳಿ `ನೂರು' ದಾಟುವ ಹಂತದಲ್ಲಿ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಎಂಬ ಸಂಸ್ಥೆಗೆ ರೂಪು ನೀಡಿದ್ದು, ಜುಲೈ 13ರಂದು ಪುತ್ತೂರು ಶ್ರೀ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಟ್ರಸ್ಟ್ ಉದ್ಘಾಟನಾ ಸಮಾರಂಭ ನಡೆದು ಲೋಕಾರ್ಪಣೆಯಾಗಲಿದೆ.
ಬೆಳಿಗ್ಗೆ 10ಕ್ಕೆ ಖ್ಯಾತ ಗಾಯಕ ಕಿಶೋರ್ ಪೆರ್ಲ ಮತ್ತು ಸಂಗಡಿಗರಿಂದ ದಾಸ ಭಕ್ತಿ ಭಜನಾಮೃತ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭಗೊಳ್ಳಲಿದೆ. ಬಳಿಕ 11.30ರಿಂದ ನಡೆಯುವ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಭಜನಾ ಪರಿಷತ್ತಿನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಸ್ವಾಗತಿಸುವರು. ರಾಮಕೃಷ್ಣ ಕಾಟುಕುಕ್ಕೆ ಪ್ರಸ್ತಾವಿಕ ಮಾತಾಡಲಿದ್ದು, ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಟ್ರಸ್ಟ್ ಉದ್ಘಾಟಿಸಿ, ಆಶೀರ್ವಚನ ನೀಡುವರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ. ಜಿ.ಪಂ ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತ ಹೇಮನಾಥ ಶೆಟ್ಟಿ, ತಂತ್ರಿ ರವೀಶ್ ಕುಂಟಾರು, ಹನುಮಗಿರಿ ಕ್ಷೇತ್ರದ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ, ಧಾರ್ಮಿಕ ಮುಂದಾಳು ಮಧುಕರ ರೈ ಕೊರೆಕ್ಕಾನ, ಉದ್ಯಮಿ ಕುಕ್ಕಂದೂರು ಚಂದ್ರಶೇಖರ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಟ್ರಸ್ಟ್ ನ ಕಾಸರಗೋಡು ವಲಯ ಪ್ರಮುಖರಾದ ಉಷಾ ಶಿವರಾಮ್ ಭಟ್ ಕಾರಿಂಜ ವಂದಿಸಲಿದ್ದು, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಸಮಗ್ರ ಕಾರ್ಯಕ್ರಮ ನಿರೂಪಿಸುವರು.
ಸಾಂಪ್ರದಾಯಿಕ ಭಜನಾ ಸಂಸ್ಕøತಿ ಸಂರಕ್ಷಣೆ, ಹಿಂದೂ ಮನೆಗಳಲ್ಲಿನ ಸಂಧ್ಯಾ ಭಜನಾ ಸಂಪ್ರದಾಯ ಪುನರುದ್ದೀಪನ, ಭಜನಾ ಮಂದಿರ-ಮಂಡಳಿಗಳ ಅಭಿವೃದ್ಧಿ ಸೇರಿದಂತೆ ಅನೇಕ ಉದ್ದೇಶಗಳನ್ನು ಟ್ರಸ್ಟ್ ಹೊಂದಿದೆ. ನಿರಂತರ ಚಟುವಟಿಕೆಗಳ ಮೂಲಕ ಭಜನಾಭ್ಯುದಯ ಮಾಡುವುದು ಟ್ರಸ್ಟ್ ಆಶಯವಾಗಿದ್ದು, ಭಜನಾರ್ಥಿಗಳ ಬೆಂಬಲ-ಪೆÇೀಷಣೆಯಿಂದ ಈ ಕೈಂಕರ್ಯ ನಡೆಲಿದೆ. ರಾಮಕೃಷ್ಣ ಕಾಟುಕುಕ್ಕೆ ಅವರ ಶಿಷ್ಯತ್ವದಲ್ಲಿ ನೂರು ಭಜನಾ ಮಂಡಳಿಗಳು ದಾಟುತಿದ್ದು, ಶಿಷ್ಯರ ಸಂಖ್ಯೆ ಸಾವಿರದೈನೂರು ದಾಟಿದೆ.

