ಕುಂಬಳೆ: ಕಕ9ಟಕ ಮಾಸಾಚರಣೆಯ ಪ್ರಯುಕ್ತ ಇಚ್ಲಂಪಾಡಿ ಕಾರಿಂಜ ಶ್ರೀಮಹಾದೇವ ಕ್ಷೇತ್ರದಲ್ಲಿ ಪ್ರಸಿದ್ದ ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ಇವರ ನೇತೃತ್ವದಲ್ಲಿ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಇವರಿಂದ ಯಕ್ಷಗಾನ ಕೂಟ ಮಂಗಳವಾರ ನಡೆಯಿತು.
ವಾಲಿಮೋಕ್ಷ ಪ್ರಸಂಗದ ಆಖ್ಯಾನದಲ್ಲಿ ಭಾಗವತರಾಗಿ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ರೋಹಿಣಿ ಎಸ್ ದಿವಾಣ, ಮದ್ದಳೆ ವಾದಕರಾಗಿ ರಾಜೇಂದ್ರ ಪ್ರಸಾದ್ ಪುಂಡಿಕಾೈಯಿ, ಅಥ9ಧಾರಿಗಳಾಗಿ ಶಿವರಾಮ ಭಂಡಾರಿ ಇಚ್ಲಂಪಾಡಿ, ಶ0ಕರ ರೈ ಮಾಸ್ತರ್ ಮಂಟಪ್ಪಾಡಿ ಬಾಡೂರು, ಶಿವಶಂಕರ ಭಟ್ ದಿವಾಣ, ಉದಯಶಂಕರ ಭಟ್ ಮಜಲು ಭಾಗವಹಿಸಿದ್ದರು. ಶ್ರೀಕ್ಷೇತ್ರದ ಆಡಳಿತ ಮಂಡಳಿ ಮತ್ತು ಶ್ರೀ ಮಹಾದೇವ ಯುವಕ ಮಂಡಲ ಇವರ ಸಹಕಾರದಿಂದ ಕಾರ್ಯಕ್ರಮ ನಡೆಯಿತು.


