ಮುಳ್ಳೇರಿಯ: ಅಡೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಅಧೀನದಲ್ಲಿರುವ ಪ್ರಾದೇಶಿಕ ಸಮಿತಿಗಳ ಪೈಕಿ ಮಯ್ಯಾಳ ಪ್ರಾದೇಶಿಕ ಸಮಿತಿಯ ಸಭೆಯು ಮಯ್ಯಾಳ ಮುಕಾಂಬಿಕಾ ಭಜನಾ ಮಂದಿರದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಎರ್ಮಾಳ ನಾರಾಯಣ ರೈ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಅಡೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಎಂ.ಪ್ರಭಾಕರ ನಾೈಕ್ ಅವರು ಮೇಘ ಬಂಪರ್ ನಿಧಿಯ ಕೂಪನ್ ಪುಸ್ತಕವನ್ನು ಪ್ರಾದೇಶಿಕ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಪ್ರತಿನಿಧಿ ಬೆಳ್ಳಿಪ್ಪಾಡಿ ಸದಾಶಿವ ರೈ, ಸಮಿತಿಯ ಕಾರ್ಯದರ್ಶಿ ಪೆರಿಯಡ್ಕ ಚಂದ್ರಶೇಖರ ರಾವ್, ಸದಸ್ಯರಾದ ಎಂ.ಕೃಷ್ಣಪ್ಪ ಮಾಸ್ತರ್, ಎ.ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ ಮಾತನಾಡಿದರು.
ಮಯ್ಯಾಳ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಎಂ.ಬಾಲಕೃಷ್ಣ ಸುವರ್ಣ ಸ್ವಾಗತಿಸಿ, ಗ್ರಾಮ ಪಂಚಾಯತಿ ಸದಸ್ಯ ಎಂ.ಐತ್ತಪ್ಪ ನಾಯ್ಕ ಹಾಗೂ ಎಕಣಮೂಲೆ ಸತ್ಯನಾರಾಯಣ ಮನೋಳಿತ್ತಾಯ ಸಲಹೆ ಸೂಚನೆ ನೀಡಿದರು. ಬಿ.ರಾಜೇಶ್ ಮಯ್ಯಾಳ ವಂದಿಸಿದರು.

