ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ತಿಂಬರ ಅರವಿಂದ ಹೊಳ್ಳ ಇವರ ಪ್ರಯತ್ನದಿಂದ ಟಿ.ಸಿಎಚ್ ಕಂಪೆನಿ ವತಿಯಿಂದ ದೊರಕಿದ 10 ಕಂಪ್ಯೂಟರ್‍ಗಳ ಹಸ್ತಾಂತರ ಹಾಗೂ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಶುಕ್ರವಾರ ಜರಗಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ತಿಂಬರ ಸುಬ್ರಾಯ ಹೊಳ್ಳರು ಕಂಪ್ಯೂಟರನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತಿಂಬರ ಲೀಲಾ ಹೊಳ್ಳ ಹಾಗೂ ಮಾತೃಸಂಘದ ಅಧ್ಯಕ್ಷೆ ಕೈರುನ್ನಿಸಾ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್. ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯ ಸುಧಾಕರ.ವಿ ಸ್ವಾಗತಿಸಿ, ಶಾಲಾ ಅಧ್ಯಾಪಿಕೆ ನಳಿನಿ ಎ ವಂದಿಸಿದರು. ಶಾಲಾ ಅಧ್ಯಾಪಕ ರಘುವೀರ್ ರಾವ್ ನಿರೂಪಿಸಿದರು.


