ಮಂಜೇಶ್ವರ: ಮೂಡೂರ್ ತೋಕೆಯ ಶ್ರೀಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ನೇ ಸಾಲಿನ ರಕ್ಷಕ-ಶಿಕ್ಷಕ ಮಹಾಸಭೆಯು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ದೇವಪ್ಪ ಶೆಟ್ಟಿ ವಹಿಸಿದ್ದರು. ನಿವೃತ ಜಿಲ್ಲಾ ವಿದ್ಯಾಧಿಕಾರಿ ಹಾಗೂ ಶ್ರೀಮಾತಾ ಸೇವಾಶ್ರಮ ನೀರೊಳಿಕೆ ಇದರ ಸಂಚಲಕ ನಾರಾಯಣ ಭಟ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಸಿದ್ದಿಕ್ ಹಾಗೂ ಮಾತೃ ಸಂಘದ ಅಧ್ಯಕ್ಷೆ ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2019-20ನೇ ವರ್ಷದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾಗಿ ಕಳೆದ ಸಾಲಿನ ಸಮಿತಿಯನ್ನು ಅವಿರೋಧವಾಗಿ ಪುನಃ ಆಯ್ಕೆಮಾಡಲಾಯಿತು. ಮುಖ್ಯೋಪಾಧ್ಯಾಯಿನಿ ಶಶಿಕಲಾ ಸ್ವಾಗತಿಸಿ, ಶಿಕ್ಷಕ ಶೈಲೇಶ್ ವಂದಿಸಿದರು.


