ಪೆರ್ಲ: ಎಣ್ಮಕಜೆ ಗ್ರಾ.ಪಂ.ಮತ್ತು ಕುಟುಂಬಶ್ರೀ ಸಿಡಿಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ "ಗದ್ದೆಯಲ್ಲಿ ಒಂದು ದಿನ" ಕಾರ್ಯಕ್ರಮ ಪೆರ್ಲ ಬಯಲಿನಲ್ಲಿ ನಡೆಯಿತು.
ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಶಾರದಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ ದೀಪಬೆಳಗಿಸಿ ಉದ್ಘಾಟಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಸುರೇಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ, ಆಯಿಷಾ ಎ.ಎ.ಪೆರ್ಲ, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ, ಕಾರ್ಯದರ್ಶಿ ಪ್ರಭಾಕರ, ಬ್ಲಾಕ್ ಸದಸ್ಯೆ ಸಫ್ರಿನಾ, ಗ್ರಾ.ಪಂ.ಸದಸ್ಯರಾದ ಪುಷ್ಪಾ,ಮಲ್ಲಿಕಾ ಜೆ.ರೈ, ಪ್ರೇಮ, ಮಮತಾ, ಬ್ಲಾ.ಪ್ರತಿನಿಧಿ ಭವ್ಯಾ, ಅಶ್ವಿನಿ, ಸೌಮ್ಯ, ಸಿಡಿಎಸ್ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದು ಶುಭಹಾರೈಸಿದರು.
ಸದಸ್ಯ ಕಾರ್ಯದರ್ಶಿ ಅಬ್ದುಲ್ ಲತೀಸ್ ಸ್ವಾಗತಿಸಿ, ಜೆಎಲ್‍ಜಿ ಕಾರ್ಯದರ್ಶಿ ಜಲಜಾಕ್ಷಿ ವಂದಿಸಿದರು. ಬಳಿಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಗ್ರಾ.ಪಂ.ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ಬಹುಮಾನಗಳನ್ನು ವಿತರಿಸಿದರು. ಸಮಾರಂಭದ ಮೊದಲು ಪೆರ್ಲ ಪೆಟೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತೆಯರಿಂದ ಭವ್ಯ ಮೆರವಣಿಗೆ ನಡೆಯಿತು.



