ಕುಂಬಳೆ: ಸಿರಿಬಾಗಿಲು ಸಾಂಸ್ಕøತಿಕ ಪ್ರತಿಷ್ಠಾನದ ಪದಾಧಿಕಾರಿಗಳು ಧರ್ಮದರ್ಶಿ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಿ.ಹರ್ಷೇಂದ್ರ ಕುಮಾರ್ ಜೊತೆ ಸಮಾಲೋಚನೆ ನಡೆಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ಯೋಜನೆಯ ಮನವಿಗೆ ಸ್ಪಂದಿಸಿದ ಹರ್ಷೇಂದ್ರ ಕುಮಾರ್ ಅವರು ಯೋಜನೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಕಾವುಮಠ, ದೇಶಮಂಗಲ ಜಯರಾಮ ಕಾರಂತ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜಯರಾಮ ರೈ ಸಿರಿಬಾಗಿಲು, ಉದಯ ಕಂಬಾರು, ಚಂದ್ರಶೇಖರ ಹೊಳ್ಳ ಕುದ್ರೆಪ್ಪಾಡಿ, ಪೆರ್ವಡಿ ಸುಬ್ರಹ್ಮಣ್ಯ ಭಟ್, ಕೆ.ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.


