ಬದಿಯಡ್ಕ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ವತಿಯಿಂದ ಸದಸ್ಯರೋರ್ವರಿಗೆ ಚಿಕಿತ್ಸಾ ಧನಸಹಾಯವನ್ನು ನೀಡಲಾಯಿತು.
ಬದಿಯಡ್ಕ ಕ್ಯಾಂಪ್ಕೋ ಶಾಖೆಯಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಫಲಾನುಭವಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಬ್ದುಲ್ ಖಾದರ್ ಎ. ಅವರ ಚಿಕಿತ್ಸಾ ಧನಸಹಾಯವಾಗಿ ಸಹೋದರ ನಿಜಾಮುದ್ದೀನ್ ಅವರಿಗೆ ರೂ. 1 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ನಿರ್ದೇಶಕರುಗಳಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಶಿವಕೃಷ್ಣ ಭಟ್ ಬಳಕ್ಕ, ಪದ್ಮರಾಜ ಪಟ್ಟಾಜೆ, ಶಂಕರನಾರಾಯಣ ಭಟ್ ಕಿದೂರು, ಜಯರಾಮ ಸರಳಾಯ, ಸಂಸ್ಥೆಯ ಸಿಬ್ಬಂದಿಗಳು ಜೊತೆಗಿದ್ದರು.


