HEALTH TIPS

ಮುಳ್ಳೇರಿಯ ಶಾಲೆಯಲ್ಲಿ "ಪೆನ್ ಫ್ರೆಂಡ್" ಯೋಜನೆಗೆ ಚಾಲನೆ

       
      ಮುಳ್ಳೇರಿಯ: ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಿಸಿ ಪುನರ್ ನಿರ್ಮಾಣ ನಡೆಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗುವ "ಪೆನ್ ಫ್ರೆಂಡ್" ಯೋಜನೆ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆರಂಭಗೊಂಡಿದೆ.
      ಹರಿತ ಕೇರಳಂ ಮಿಷನ್ ವತಿಯಿಂದ ಪ್ರಕೃತಿ ಸಂರಕ್ಷಣೆ ಜಾಗೃತಿ ಉದ್ದೇಶದಿಂದ ಈ ಯೋಜನೆ ಜಾರಿಗೊಳ್ಳುತ್ತಿದೆ.  ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ  ಯೋಜನೆಗೆ ಚಾಲನೆ ನೀಡಿದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆ ಕುರಿತು ಮಾಹಿತಿ ನೀಡಿದರು. ಶಾಲೆ ಪ್ರಬಂಧಕ ಡಾ.ವಿ.ಇ.ರಮಣ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಪದ್ಮನಾಭನ್, ಎಂ.ಸಾವಿತ್ರಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಅಶೋಕ ಅರಳಿತ್ತಾಯ ಸ್ವಾಗತಿಸಿ, ಎನ್.ಜಿ.ಗೋಪಾಲಕೃಷ್ಣನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries