ಸೂಕ್ತ ಉದ್ಯೋಗ ಹಂಬಲದಿಂದ ಕಚೇರಿಗಳಿಗೆ ಅಲೆದಾಡುತ್ತಿರುವ ಮೀನಾಕ್ಷಿ ಬೊಡ್ಡೋಡಿ-ಕನ್ನಡ ಕಲಿತಿರುವುದನ್ನೇ ಬೊಟ್ಟು ಮಾಡಿ ದೂಶಿಸುವ ಇಲಾಖೆ!
ಮಂಜೇಶ್ವರ: ಸರ್ಕಾರಿ ಇಲಾಖೆಗಳು ಹಿಂದುಳಿದ ವರ್ಗ-ವಿಭಾಗದ ಹೆಸರು ಹೇಳಿ ಮಾಡುತ್ತಿರುವ ವಂಚನೆಗೆ ಸಾಕ್ಷ್ಯವೆಂಬಂತೆ
ಇತ್ತೀಚೆಗೆ ಜಿಲ್ಲೆಯಲ್ಲೇ ಮೊತ್ತಮೊದಲ ಬಾರಿಗೆ ಎಂ.ಫಿಲ್ ಪದವಿ ಪಡೆದಿರುವ ಕೊರಗ ವಿಭಾಗದ ಮಹಿಳೆಯೋರ್ವೆ ಪ್ರಸ್ತುತ ಬದುಕು ನಿರ್ವಹಿಸಲು ಬೀಡಿ ಕಟ್ಟುತ್ತಿರುವ ದುರ್ದೈವದ ಪರಿಸ್ಥಿತಿ ಬೆಚ್ಚಿಬೀಳಿಸಿದೆ.
ಐದು ವರ್ಷಗಳ ಹಿಂದೆ ಜಿಲ್ಲೆಯ ಹೆಮ್ಮೆಯ ಪುತ್ರಿ ಎನಿಸಿಕೊಂಡ ಮೀನಾಕ್ಷಿ ಬೊಡ್ಡೋಡಿ ಕೊರಗ ಹಿಂದುಳಿದ ಸಮುದಾಯದಿಂದ ಉನ್ನತ ಪದವಿ ಗಿಟ್ಟಿಸಿಕೊಂಡ ಪ್ರಥಮ ಮಹಿಳೆ ಎನಿಸಿಕೊಂಡಿದ್ದರು. ಹಿಂದುಳಿದ ಸಮುದಾಯದಿಂದ ಬಂದ ಮೀನಾಕ್ಷಿ ಬೊಡ್ಡೋಡಿ ಸಾಧನೆಯನ್ನು ಗುರುತಿಸಿದ ಭಾರತ ಸರಕಾರ, ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 2014 ರಲ್ಲಿ ನಡೆದ ಗಣತಂತ್ರ ದಿನದ ಜೌತಣ ಕೂಟದಲ್ಲಿ ಭಾಗವಹಿಸುವ ಆಹ್ವಾನ ನೀಡಿದ್ದರು. ನಂತರ ಬೊಡ್ಡೋಡಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಂ.ಫಿಲ್ ಪದವಿಗೆ ನೋಂದಣಿಯಾಗಿದ್ದರು. ಕೊರಗ ಸಂಸ್ಕøತಿಯ ಅಧ್ಯಯನ ಆಕೆಯ ಪ್ರಧಾನ ವಿಷಯವಾಗಿತ್ತು. ಕಳೆದ ವಾರವಷ್ಟೆ ಇವರು ಎಂ.ಫಿಲ್ ಪದವಿಯನ್ನೂ ಪಡೆದಿದ್ದರು.
ಆದರೆ ಪ್ರಸ್ತುತ ಸರ್ಕಾರಿ ಸಂಸ್ಥೆ ಮತ್ತು ಸಮಾಜವು ಆಕೆಯನ್ನು ನೋಡುವ ಪರಿ ಬದಲಾಗಿಲ್ಲ, ತನ್ನ ಉಳಿದ ಸಮುದಾಯ ಮಂದಿಯಂತೆ ಆಕೆಯನ್ನೂ ಕಾಣಲಾಗುತ್ತಿದೆ.
ಪ್ರಸ್ತುತ ಬೊಡ್ಡೋಡಿಯು ಬೀಡಿ ಕಟ್ಟುವ ಮೂಲಕ ದಿನದೂಡುವಂತಾಗಿದೆ. ತಂಬಾಕಿನ ಎಳೆ ತುಂಡುಗಳನ್ನು ಒಣಗಿದ ಎಲೆಯಲ್ಲಿ ಸುರುಳುವ ಕಾಯಕ ಆಕೆಯದ್ದು, ದಿನವೊಂದಕ್ಕೆ 500 ರಿಂದ 600 ಬೀಡಿಗಳನ್ನು ಕಟ್ಟುತ್ತೇನೆ ಎನ್ನುತ್ತಾರೆ ಮೀನಾಕ್ಷಿ ಬೊಡ್ಡೋಡಿ. ದಿನಕ್ಕೆ 1000 ಬೀಡಿ ಕಟ್ಟಿದರೆ ಆಕೆಗೆ 150 ರೂ. ಲಭಿಸುತ್ತದೆ. ಆಕೆಯ ಪತಿ ರತ್ನಾಕರ(35) ಖಾಸಗಿ ಬಸ್ಸಿನಲ್ಲಿ ದುಡಿಯುತ್ತಿದ್ದಾರೆ. ಆದರೆ ವಾರದಲ್ಲಿ ಎರಡೇ ದಿನ ಕೆಲಸವಿರುವ ಕಾರಣ ಜೀವನ ಪಯಣ ಸಂಕಷ್ಟದಲ್ಲಿದೆ. ದಂಪತಿಗೆ ಮೂರು ವರ್ಷ ಪ್ರಾಯದ ಮೋಕ್ಷಿತ್ ಎಂಬ ಮಗನಿದ್ದು, ಇಳಿ ವಯಸ್ಸಿನ ತಂದೆ ತಾಯಿಯರಿದ್ದಾರೆ. ಕುಟುಂಬವನ್ನು ಸಲಹುವ ಜವಾಬ್ದಾರಿಯು ಬೊಡ್ಡೋಡಿ ದಂಪತಿಯ ಮೇಲಿದೆ. ಜೀವನ ನಿರ್ವಹಣೆ ಕಷ್ಟಕರವಾದ ಸನ್ನಿವೇಶದೊಂದಿಗೆ ಎಲ್ಲ ಕಷ್ಟಗಳನ್ನು ಮೀರಿದ ಸಾಧನೆ ಮೀನಾಕ್ಷಿ ಬೊಡ್ಡೋಡಿಯದ್ದಾಗಿದೆ. ಶಿಕ್ಷಕಿ ಆಗುವ ಹಂಬಲವಿದ್ದ ಮೀನಾಕ್ಷಿ ಬೊಡ್ಡೋಡಿ ಬಿ.ಎಡ್ ವ್ಯಾಸಂಗವನ್ನು ಪೂರೈಸಿದ್ದು, ಮನಶಾಸ್ತ್ರ ವಿಷಯದಲ್ಲಿ ಅತಿ ಕಡಿಮೆ ಅಂಕ ಬಂದ ಕಾರಣ ಶಿಕ್ಷಕಿಯಾಗಲು ಮಗದೊಮ್ಮೆ ಪ್ರಯತ್ನಿಸಬೇಕಿದೆ. ಮನೆ ನಿರ್ವಹಣೆಯೊಂದಿಗೆ, ಶಿಕ್ಷಣವನ್ನು ಪೂರೈಸಿದ ಮೀನಾಕ್ಷಿಯ ಸಾಧನೆ ಸುತ್ಯರ್ಹವಾಗಿದೆ, ಕಾಸರಗೋಡು ಜಿಲ್ಲೆ ಬುಡಕಟ್ಟು ಅಭಿವೃದ್ಧಿ ವಿಭಾಗದ ಅಧೀನದಲ್ಲಿ ಮ್ಯಾನೆಜ್‍ಮೆಂಟ್ ಟ್ರೈನಿಯಾಗಿ(ಆಡಳಿತ ತರಬೇತಿ) ಅಭ್ಯರ್ಥಿಯಾಗಿ ಸೇರುವ ಅವಕಾಶವೂ ಆಕೆಯ ಕಣ್ಣ ಮುಂದಿದೆ. ಸ್ಥಳೀಯ ಕಡಂಬಾರು ಗ್ರಾಮ ಕಚೇರಿಗೆ ಆಗಮಿಸಿದ್ದ ಮೀನಾಕ್ಷಿ ವರಮಾನ ಪತ್ರ ಮತ್ತು ಸಮುದಾಯ ಪತ್ರ ಪಡೆಯುವ ಮೂಲಕ ಹೊಸ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಅಲೆದಾಟ ಇವರಿಗೂ ತಪ್ಪಿಲ್ಲ!
ಮೀನಾಕ್ಷಿ ಬೊಡ್ಡೋಡಿ ಕಳೆದ ವಾರ ತನ್ನ ಪೂರ್ತಿ ಎರಡು ದಿನವನ್ನು ಉದ್ಯೋಗ ಗಿಟ್ಟಿಸಿಕೊಳ್ಳುವ ದೃಷ್ಠಿಯಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದಾರೆ. ಕಡಂಬಾರು ಗ್ರಾಮ ಕಚೇರಿಗೆ ಆಗಮಿಸಿದ ಮೀನಾಕ್ಷಿಗೆ ಆದಾಯ ಋಜುಪತ್ರ ಹಾಗೂ ಸಮುದಾಯ ನಿರ್ಧರಣಾ ಪತ್ರದ(ಕಮ್ಯುನಿಟಿ ಸರ್ಟಿಫಿಕೇಟ್) ಅವಶ್ಯಕತೆಯಿತ್ತು. ಆದರೆ ಕಚೇರಿ ಅಧಿಕಾರಿ ಪ್ರಾರ್ಥನೆಗೆ ತೆರಳಿದ್ದ ಕಾರಣ ಹಲವು ಗಂಟೆಗಳನ್ನು ಕಚೇರಿಯ ಬೆಂಚಲ್ಲಿ ಕುಳಿತು ಕಾಲ ವ್ಯಯಿಸಬೇಕಾಯಿತು. ಸಾಯಂಕಾಲ 4 ಗಂಟೆಗೆ ಆಗಮಿಸಿದ ಕಚೇರಿ ಅಧಿಕಾರಿ ವರಮಾನ ಪತ್ರವನ್ನು ನೀಡುವುದಾಗಿಯೂ, ಸಮುದಾಯ ಪತ್ರವನ್ನು ತಾಲೂಕು ಕಚೇರಿಯಲ್ಲಿ ಪಡೆಯವಂತೆಯೂ ಸೂಚಿಸಿದರು. ಅಧಿಕಾರಶಾಹಿಗೆ ಬೊಡ್ಡೋಡಿ ಹಾಗೂ ಆಕೆಯ ಸಾಧನೆಯ ಪರಿವೇ ಇಲ್ಲದಂತಾಗಿದೆ! ಕಚೇರಿ ಅಲೆಯುವುದರಿಂದ ಬೀಡಿ ಕಟ್ಟುವ ಮೂಲಕ ಸಿಗುವ ದಿನದ ಹಣ 75 ರೂ.ಗಳು. ಇಲ್ಲದಂತಾಗಿದೆ.
ಮೀನಾಕ್ಷಿ ಸಾಧನೆ ಆಕೆಯ ಸಮುದಾಯದ ಸಾಧನೆಯಾಗಿ ಪ್ರತಿಬಿಂಬಿತವಾಗಿದೆ, ಶತಮಾನದ ದಾಸ್ಯ ಸಂಕೋಲೆಯಿಂದ ಹೊರಬಂದು ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿರುವ ಮೀನಾಕ್ಷಿಯು ಹೊಸ ತಲೆಮಾರಿನ ಸಮುದಾಯ ಮಂದಿಗೆ ಭರವಸೆ, ಆತ್ಮವಿಶ್ವಾಸದೊಂದಿಗೆ ಮಾರ್ಗದರ್ಶಿಯಾಗಿದ್ದಾರೆ.
ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಆನಂದನ್ ಕೃಷ್ಣನ್ ಅವರ ಪ್ರಕಾರ ಜಿಲ್ಲೆಯಲ್ಲಿ ಪದವಿ ಶಿಕ್ಷಣ ಪಡೆದ ಕೊರಗ ಸಮುದಾಯದವರು ಕೇವಲ 6 ಮಂದಿ. ಜಿಲ್ಲೆಯಲ್ಲಿ 560 ರಷ್ಟು ಕೊರಗ ಮನೆಗಳಿದ್ದು, 1800 ರಷ್ಟು ಜನಸಂಖ್ಯೆಯಿದೆ. ಒಟ್ಟು 13 ಗ್ರಾಮ ಪಂಚಾಯತುಗಳಲ್ಲಿ ಹಂಚಿ ಹೋಗಿರುವ ಕೊರಗರು ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಹೆಚ್ಚಾಗಿದ್ದಾರೆ. ಬುಟ್ಟಿ ಹೆಣೆಯುವ ಕಾಯಕವನ್ನು ಜೀವನ ವೃತ್ತಿಯಾಗಿಸಿರುವ ಕೊರಗರು ಪ್ರಸ್ತುತ ಮೂಲ ಕಸುಬನ್ನು ಬಿಟ್ಟು ಹೆಚ್ಚು ದುಡಿಮೆ ಇರುವ ಅನ್ಯ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸರಕಾರವು ಕೊರಗ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಒಟ್ಟಾರೆ 100 ಕೋಟಿ ರೂ.ಗಳನ್ನು ನೀಡಿದೆ. ವಸತಿ,ಶಿಕ್ಷಣ, ಆರೋಗ್ಯ, ಸ್ವಾವಲಂಬನೆಯ ಮೂಲಕ ಆರ್ಥಿಕ ಸ್ಥಿತಿಯ ಸುಧಾರಣೆ ಧ್ಯೇಯೋದ್ದೇಶವಿದ್ದರೂ ಸಮುದಾಯದಲ್ಲಿ ಸಾಕಷ್ಟು ಬದಲಾವಣೆ ಆಗಿಲ್ಲ ಎನ್ನಲಾಗಿದೆ.
ಸರ್ಕಾರದ ವತಿಯಿಂದ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಕುಂದಂಕುಳಿಯಲ್ಲಿ ವಸತಿ ಶಾಲೆಯನ್ನು ಆರಂಭಿಸಲಾಗಿದೆ. ಶಾಲೆಯಲ್ಲಿ ಒಟ್ಟಾರೆ 65 ಮಕ್ಕಳಿದ್ದಾರೆ, ಆದರಲ್ಲಿ ಓರ್ವ ವಿದ್ಯಾರ್ಥಿ ಕೊರಗ ಸಮುದಾಯವನಾಗಿದ್ದಾನೆ. ಕೊರಗ ಬುಡಕಟ್ಟು ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಬಹು ಕಷ್ಟವಾಗಿದೆ ಎನ್ನುತ್ತಾರೆ ಬುಡಕಟ್ಟು ಅಭಿವೃದ್ಧಿ ಅಧಿಕಾರಿ. ಕಾಸರಗೋಡು ಜಿಲ್ಲಾ ಪಂಚಾಯತು ವತಿಯಿಂದ ಸಮುದಾಯದ ಒಟ್ಟಾರೆ ಅಭಿವೃದ್ಧಿಗಾಗಿ 15 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ ಈ ಹಣದಿಂದ ಕೇವಲ ಪೌಷ್ಠಿಕ ಆಹಾರವನ್ನು ಮಾತ್ರ ನೀಡಬಹುದಾಗಿದೆ ಎಂದು ಹೇಳಲಾಗುತ್ತಿದೆ.
ಮೀನಾಕ್ಷಿಯವರ ಅಂತರಂಗ ಏನು-ಹೀಗಾದರೆ ಹೇಗೆ!:
ನಮ್ಮ ಇಡೀ ಸಮುದಾಯದಲ್ಲಿ ಡಿಗ್ರಿ ಪೂರ್ತಿ ಮಾಡಿದವರು ಇಬ್ರೋ, ಮೂವರೋ ಮಂದಿ!, ಸರಕಾರಿ ಉದ್ಯೋಗಿಗಳು ಒಬ್ರು, ಇಬ್ರು. ನಾನು ಎಂ.ಎ, ಎಂ.ಫಿಲ್ ಮಾಡಿಯೂ ಬೀಡಿ ಕಟ್ಟುತ್ತಾ ಇರುವಾಗ ನಮ್ಮ ಸಮುದಾಯದವರು ಬಂದು ಕೇಳ್ತಾರೆ-" ಇಷ್ಟು ಕಲಿತ ನಿನಗೆ ಕೆಲಸ ಇಲ್ಲ, ಮತ್ತೆ ನಾವ್ಯಾಕೆ ಶಾಲೆಗೆ ಅಥವಾ ಕಾಲೇಜಿಗೆ ಹೋಗಬೇಕು? ಈ ಪ್ರಶ್ನೆಗೆ ಮೊದಲು ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೇನೆ ಎನ್ನುತ್ತಾರೆ ಬೊಡ್ಡೋಡಿ.
'ನಾವು ಚಿಕ್ಕವರಿದ್ದಾಗ ತುಳು ಉಪಭಾಷೆ -ಕೊರಗ ತುಳುವಿನಲ್ಲಿ ಮಾತನಾಡುತ್ತಿದ್ದೆವು, ಇಂದು ನಮ್ಮ ಮಾತೃಭಾಷೆಯ ಮೂಲ ಶಬ್ದಗಳೆ ಇಲ್ಲವಾಗುತ್ತಿವೆ, ವಾಕ್ಯದಲ್ಲಿ ಕೇವಲ ಎರಡೇ ಎರಡು ಶಬ್ದಗಳಷ್ಟೆ ಕೊರಗ ಮೂಲ ಭಾಷೆಯ ಶಬ್ದಗಳಾಗಿರುತ್ತವೆ' ಎಂದೆನ್ನುತ್ತಾರೆ ಮೀನಾಕ್ಷಿ.
ಅಭಿಮತ:
ಮೀನಾಕ್ಷಿಯವರ ಸಾಧನೆ ಮೆಚ್ಚುವಂತದ್ದು. ಇಲಾಖೆ ವತಿಯಿಂದ ಆಕೆಯ ಜೀವನ ನಿರ್ವಹಣೆಗೆ ಪುಟ್ಟ ಮೊತ್ತವೊಂದನ್ನು ಈ ಹಿಂದೆ ನೀಡಲಾಗುತ್ತಿತ್ತು. ಆದರೆ ಇದೀಗ ಕೆಲವು ತಿಂಗಳುಗಳಿಂದ ಅದು ಲಭ್ಯವಾಗುತ್ತಿಲ್ಲ. ಆ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜೊತೆಗೆ ಮೀನಾಕ್ಷಿಯವರು ಟಿಟಿಸಿ ಅಥವಾ ಬಿ.ಇಡಿ ಯಂತಹ ವೃತ್ತಿಪರ ತರಗತಿಗಳನ್ನು ಪೂರೈಸದಿರುವುದು, ಟೆಟ್ ಪರೀಕ್ಷೆಗಳನ್ನು ನಿರ್ವಹಿಸದಿರುವುದರಿಂದ ಶಿಕ್ಷಕ ಕೇಂದ್ರಿತ ಉದ್ಯೋಗ ನೀಡಲಾಗುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತಿರುವುದರಿಂದ ಜಿಲ್ಲೆಯ ಇತರ ಜಿಲ್ಲೆಗಳಲ್ಲಿ ಯಾವ ಉದ್ಯೋಗವನ್ನೂ ಕೊಡಿಸುವ ಸ್ಥಿತಿಯಲ್ಲಿಲ್ಲ. ಈ ಕಾರಣದಿಂದ ನೆರವು ನೀಡುವಲ್ಲಿ ತೊಡಕಾಗಿದೆ. ಮುಂದಿನ ವರ್ಷವಾದರೂ ಬಿಇಡಿ ಪೂರ್ತಿಗೊಳಿಸಿದರೆ ಶಿಕ್ಷಕಿ ವೃತ್ತಿಯನ್ನು ಖಂಡಿತಾ ನೀಡಲಾಗುವುದು.
ಅನಂತಕೃಷ್ಣನ್.
ಜಿಲ್ಲಾ ಬುಡಕಟ್ಟು ಅಭಿವೃದ್ದಿ(ಕೊರಗ-ಹಿಂದುಳಿದ ವರ್ಗ)ಅಧಿಕಾರಿ.ಕಾಸರಗೋಡು.