ಬದಿಯಡ್ಕ: ನಾರಂಪಾಡಿ ಫಾತಿಮಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಸಭೆ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಜೋನ್ ಬ್ಯಾಪ್ಟಿಸ್ಟ್ ಮೋರಾಸ್ ವಹಿಸಿದರು. ನೂತನ ಶೈಕ್ಷಣಿಕ ವರ್ಷದ ಕಾರ್ಯಕಾರಿ ಸಮಿತಿ ರಚನೆ ಈ ಸಂದರ್ಭ ನಡೆಯಿತು. ವಿಜಯ್ ಕ್ರಾಸ್ತಾ ಅಧ್ಯಕ್ಷರಾಗಿಯೂ, ಅರುಣ್ ಪ್ರಕಾಶ್ ಉಪಾಧ್ಯಕ್ಷರಾಗಿಯೂ, ಸಾರಾ ಮಾತೃ ಸಂಘದ ಅಧ್ಯಕ್ಷೆಯಾಗಿಯೂ, ಶಕುಂತಳಾ ಉಪಾಧ್ಯಕ್ಷೆಯಾಗಿಯೂ, ತೋಮಸ್ ಕ್ರಾಸ್ತಾ ಎಸ್.ಎಸ್.ಜಿ ಕನ್ವೀನರ್ ಆಗಿಯೂ ಆಯ್ಕೆಯಾದರು.
ಮಖ್ಯೋಪಾಧ್ಯಾಯಿನಿ ಸಿಸ್ಚರ್ ಹೆಲೆನ್ ಲೆಕ್ಕಪತ್ರ ಮಂಡಿಸಿದರು. ಸಿಸ್ಟರ್ ಪ್ರೆಸಿಲ್ಲಾ ಹಾಗೂ ಬಿಜಿ ಟೀಚರು ವರದಿ ಮಂಡಿಸಿದರು. ಸುಮೇಶ್ ಚಂದ್ರ ಸ್ವಾಗತಿಸಿ, ಲಿಲಿ ್ಲಕ್ರಾಸ್ತಾ ವಂದಿಸಿದರು. ಸೀನಾ ಜೋಸೆಫ್ ಮತ್ತು ಸುಜಾತಾ ಟಿ.ಎಂ. ಕಾರ್ಯಕ್ರಮ ನಿರೂಪಿಸಿದರು.


