ಮುಳ್ಳೇರಿಯ :ಬ್ರಾಹ್ಮಣ್ಯದ ಸಂಸ್ಕಾರವನ್ನು ಭಾವಿ ಜನಾಂಗಕ್ಕೆ ದಾಟಿಸುವ ಯತ್ನ ನಡೆಯಬೇಕು. ಮಕ್ಕಳಿಗೆ ಸಂಪ್ರದಾಯಗಳನ್ನು ಕಲಿಸುವ ಹಿನ್ನೆಲೆಯಲ್ಲಿ ಹಿರಿಯರು ಅಗತ್ಯವಾಗಿ ಪರಂಪರೆಯಿಂದ ಬಂದ ಆಚಾರಗಳನ್ನು ಉಳಿಸಿಕೊಳ್ಳಬೇಕು. ಸಂಘಟನೆಗಳು ಒಗ್ಗಟ್ಟಿನ ಶಕ್ತಿಯಾಗಬೇಕು. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹದಿಂದ ಸಂಘಟನೆಯ ಬಗ್ಗೆ ಕಿರಿಯರಿಗೆ ಗೌರವ ಹಾಗೂ ಪ್ರೀತಿ ಹುಟ್ಟುತ್ತದೆ' ಎಂದು ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಹೇಳಿದರು.
ಅವರು ಭಾನುವಾರ ಮುಳ್ಳೇರಿಯ ಸಮೀಪದ ಬೆಳ್ಳೂರು ಮಹಾವಿಷ್ಣು ಕ್ಷೇತ್ರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರು ವಹಿಸಿದ್ದರು. ಕಾರ್ಯಕ್ರಮಕ್ಕೆ ನಿರೀಕ್ಷಕರಾಗಿ ಆಗಮಿಸಿದ ಉಡುಪಿ ಮಾಧ್ವ ಬ್ರಾಹ್ಮಣ ಸೆಂಟ್ರಲ್ ವರ್ಕಿಂಗ್ ಸಮಿತಿ ಅಧ್ಯಕ್ಷ ವಿಶ್ರುತ್ ಪಿ ಆರ್ ಮಾತನಾಡಿ,ಬ್ರಾಹ್ಮಣ್ಯದ ಸಂಸ್ಕಾರದಿಂದ ಮನಸ್ಸಿನ ವಿಕಾರಗಳ ನಾಶವಾಗಿ ಆಧ್ಯಾತ್ಮಿಕ ಚಿಂತನೆಗಳು ಜಾಗೃತವಾಗುತ್ತದೆ. ಮಾನವನಿಗೆ ಏಕಾಂಗಿ ಜೀವನ ಸಾಧ್ಯವಿಲ್ಲ. ಸಮಾಜ ಜೀವನವು ಬದುಕಲು ಕಲಿಸುತ್ತದೆ. ಕಳೆದ 36 ವರ್ಷಗಳಿಂದ ನಿರಂತರ ಚಟುವಟಿಕೆಯಲ್ಲಿರುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಬಗ್ಗೆ ಕಾಸರಗೋಡಿನಿಂದ ಕನ್ಯಾಕುಮಾರಿಯ ತನಕ ಗೌರವವಿದೆ ಎಂದು ಹೇಳಿದರು.
ಸಭೆಯಲ್ಲಿ ಯುಎಂಬಿಎಸ್ ರಕ್ಷಾಧಿಕಾರಿ ರಾಮ್‍ಪ್ರಸಾದ್ ಭಟ್ ಕಾಸರಗೋಡು, ಜಿಲ್ಲಾ ಖಜಾಂಜಿ ಶ್ರೀನಿವಾಸ ಕಣ್ಣಾರಾಯ, ಕಾಸರಗೋಡು ಜಿಲ್ಲಾ ಶಿವಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಬೈಪಡಿತ್ತಾಯ, ಸಂಘಟನೆಯ ನೂತನ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮಾ ಎಂ ಭಾರಿತ್ತಾಯ, ನೂತನ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಟಿ ಕೆ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾ ನೂತನ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 80 ವರ್ಷ ಪೂರೈಸಿದ ಸಮುದಾಯದ ಹಿರಿಯರನ್ನು, ವಿವಾಹದ 50 ವರ್ಷದ ಪೂರೈಸಿದ ದಂಪತಿಗಳನ್ನು, ಸಮಾಜದ ಉತ್ತಮ ಸೇವಕ ಹಾಗೂ ಸೇವಕಿಯರನ್ನು, ವಿಶೇಷ ಪ್ರತಿಭೆಗಳನ್ನು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜಿತ ಸರಳಾಯ, ಪ್ರತಿಮಾ ಭಾರಿತ್ತಾಯ ಹಾಗೂ ಅನನ್ಯಾ ಭಾರಿತ್ತಾಯ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯದರ್ಶಿ ಅರವಿಂದ ಕುಮಾರ ಅಲೆವೂರಾಯ ಸ್ವಾಗತಿಸಿ, ಮುಳ್ಳೇರಿಯ ವಲಯ ಉಪಾಧ್ಯಕ್ಷ ಶ್ರೀಪತಿ ಕಡಂಬಳಿತ್ತಾಯ ವಂದಿಸಿದರು. ಪ್ರಶಾಂತ ರಾಜ ವಿ ತಂತ್ರಿ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಮುಂದಿನ ವರ್ಷದ ಜಿಲ್ಲಾ ಸಮಾವೇಶ, ಸಾಂಸ್ಕøತಿಕ ಉತ್ಸವ ಹಾಗೂ ಕ್ರೀಡೋತ್ಸವವು ಕಾಸರಗೋಡು ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ನಡೆಯುವ ಹಿನ್ನಲೆಯಲ್ಲಿ ಸಂಘಟನೆಯ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮಹಾಸಭೆ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಮಹಾಸಭೆಯು ಭಾನುವಾರ ನಡೆಯಿತು. ಮುಳ್ಳೇರಿಯ ವಲಯ ಅಧ್ಯಕ್ಷ ದಿನೇಶ್ ಕುಮಾರ ಅಡಿಗ ಧ್ವಜಾರೋಹಣ ಮಾಡಿದರು. ವಿಷ್ಣುಸಹಸ್ರನಾವi ಪಾರಾಯಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಪ್ರಕಾಶ ಪಾಂಙಣ್ಣಾಯ ಸ್ವಾಗತಿಸಿ, ಶ್ರೀನಿವಾಸ ಕಣ್ಣಾರಾಯ ಲೆಕ್ಕಪತ್ರ ಮಂಡಿಸಿದರು. ಅರವಿಂದ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ಘಟಕದ ಲೆಕ್ಕಪತ್ರವನ್ನು ಶೋಭಿತಾ ಮಂಜುನಾಥ್ ಹಾಗೂ ವಾರ್ಷಿಕ ವರದಿಯನ್ನು ಸೀತಾರತ್ನ ಪುಣಿಂಚಿತ್ತಾಯ ಮಂಡಿಸಿದರು. ಸಭೆಯಲ್ಲಿ ರಕ್ಷಾಧಿಕಾರಿಗಳಾದ ಪಣಿಯೆ ಸೀತಾರಾಮ ಕುಂಜತ್ತಾಯ, ಕಕ್ಕೆಪ್ಪಾಡಿ ವಿಷ್ಣು ಭಟ್, ರತನ್ ಕುಮಾರ ಕಾಮಡ, ಚೇತನ್ ಡಿ ಕುಣಿಕುಳ್ಳಾಯ, ಶ್ರೀಧರ ಬೈಪಾಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಬಂಬ್ರಾಣ ಸೀತಾರಾಮ ಕಡಮಣ್ಣಾಯ ವಂದಿಸಿದರು. ಸತೀಶ್ ಪುಣಿಂಚಿತ್ತಾಯ ನಿರೂಪಿಸಿದರು.


