ಮುಳ್ಳೇರಿಯ: ಜಿಲ್ಲೆಯ ಭಾರತೀಯ ವಿದ್ಯಾನಿಕೇತನ್ ಗಂಗಾ ಸಂಕುಲದ 8 ಶಾಲೆಗಳ ಸಮಾವೇಶ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ಶನಿವಾರ ನಡೆಯಿತು.
ಶಿಕ್ಷಕರು, ವಿದ್ಯಾನಿಕೇತನ್ ಪದಾಧಿಕಾರಿಗಳು ಸೇರಿ 227 ಮಂದಿ ಇದರಲ್ಲಿ ಭಾಗವಹಿಸಿದರು. ಭಾರತೀಯ ವಿದ್ಯಾನಿಕೇತನ್ ಕೇರಳ ಇದರ ಪ್ರಧಾನ ಕಾರ್ಯದರ್ಶಿ ಸುಂದರೇಶ ಉಣ್ಣಿ ಉದ್ಘಾಟಿಸಿ ಶಿಕ್ಷಣದ ಮೂಲಕ ಸಾಮಾಜಿಕ, ಸಾಂಸ್ಕøತಿಕ ಬದಲಾವಣೆಯ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಕಾಸರಗೋಡು ಜಿಲ್ಲಾ ಅಧ್ಯಕ್ಷ ಶಿವಶಂಕರ ನಾಯರ್ ಅಧ್ಯಕ್ಷತೆ ವಹಿಸಿದರು. ರಕ್ಷಾಧಿಕಾರಿ ಕೃಷ್ಣನ್, ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಮುಖ್ಯ ಶಿಕ್ಷಕ ವೇಣುಗೋಪಾಲನ್ ಉಪಸ್ಥಿತರಿದರು. ಗಣೇಶ್ ಮಾವುಂಗಾಲ್ ಸ್ವಾಗತಿಸಿದರು.
ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್ ಮಟ್ಟದ ಶಿಕ್ಷಣದ ಮುನ್ನಡೆ, ಶಾಲೆಗಳ ಅಭಿವೃದ್ಧಿ, ಪಂಚಮುಖಿ ಶಿಕ್ಷಣ ಮೊದಲಾದ ವಿಚಾರಗಳ ಬಗ್ಗೆ ಗುಂಪುಗಳಲ್ಲಿ ಚರ್ಚಿಸಿ ಕ್ರೋಡೀಕರಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ರವಿತೇಜ ಮತ್ತು ಅಭಿಷೇಕ್, ಪ್ರಾಂತ್ಯ ಮಟ್ಟದ ಕಲಾ ಮೇಳದಲ್ಲಿ ಎ ಗ್ರೇಡ್ ಪಡೆದ ಪ್ರಾರ್ಥನಾ ರನ್ನು ಅಭಿನಂದಿಸಲಾಯಿತು. ಭಾರತೀಯ ವಿದ್ಯಾನಿಕೇತನ್ ರಕ್ಷಾಧಿಕಾರಿ ಕೃಷ್ಣನ್ ಸಮಾರೋಪ ಭಾಷಣ ಮಾಡಿದರು.


