ಕುಂಬಳೆ: ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಸೇವಾಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಮಹಾಸಭೆ ಭಾನುವಾರ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಲೆಕ್ಕಪತ್ರವನ್ನು ಯಚ್. ಸೂರ್ಯನಾರಾಯಣ ಮಂಡಿಸಿದರು. ಕೃಷ್ಣಭಟ್ ಅಮ್ಮಂಕಲ್ಲು ಬ್ರಹ್ಮಕಲಶೋತ್ಸವದ ಲೆಕ್ಕಪತ್ರವನ್ನು ಮಂಡಿಸಿದರು. ಈ ಸಂದರ್ಭ ನೂತನ ಸೇವಾ ಸಮಿತಿಯನ್ನು ರಚಿಸಲಾಯಿತು. ನೂತನ ಸೇವಾ ಸಮಿತಿ ಅಧ್ಯಕ್ಷರು ಯಚ್. ಶಂಕರನಾರಾಯಣ. ಭಟ್ ಹೊಸಮನೆ, ಉಪಾಧ್ಯಕ್ಷರು ಯಸ್. ಆನಂದ ಭಂಡಾರಿ ಸೂರಂಬೈಲು ಹಾಗೂ ನಾರಾಯಣ ಗಟ್ಟಿ ಕಾಫಿಕ್ಕಾಡು, ಕಾರ್ಯದರ್ಶಿ ಯಚ್. ಸೂರ್ಯನಾರಾಯಣ. ಹೊಸಮನೆ, ಜೊತೆಕಾರ್ಯದರ್ಶಿ ಶ್ಯಾಮಪ್ರಸಾದ. ವೈ. ಎಯ್ಯೂರುಮೂಲೆ, ಖಜಾಂಜಿ ಕೃಷ್ಣಮೂರ್ತಿ ಪಾಡಿ, ಕಾರ್ಯಕಾರೀ ಸಮಿತಿಯ ಸದಸ್ಯರುಗಳಾಗಿ ಸಿ.ಯಸ್. ಗೋಪಾಲಕೃಷ್ಣ ಭಟ್ ಚೆನ್ನಂಪಾಡಿ, ಸುಬ್ರಹ್ಮಣ್ಯ ಭಟ್ ಕುಕ್ಕುಪ್ಪುಳಿ, ಉದಯಕುಮಾರ್ ಮುಖಾರಿಗದ್ದೆ, ಶಂಕರನಾರಾಯಣ ಭಟ್. ಎ, ಶಂಕರ ಸಜಂಕಳ, ಉದನೇಶ್ವರ ಮುಖಾರಿ ಶಡ್ರಂಪಾಡಿ,
ನಾರಾಯಣ ಪೂಜಾರಿ ಜಿ.ಕೆ ನಗರ, ಜಯಂತ ವಾಟಾಳಿ, ರಾಮ ಪಾಟಾಳಿ ಕಾವೇರಿಕಾನ, ವೆಂಕಪ್ಪ ಭಟ್ ಕಾವೇರಿಕಾನಮೂಲೆ, ಪದ್ಮನಾಭ ಮುಖಾರಿಗದ್ದೆ, ರಮೇಶ್ ಕೋಡಿಮೂಲೆ, ವೆಂಕಟ್ರಮಣ. ಭಟ್ ಮುನ್ನೂರು, ಹರಿಣಿ ಜಿ.ಕೆ ನಾಯಕ್ ಪೆರ್ಣೆ, ಅಕ್ಷತಾ ಕೊಳ್ತಿಂಗಾಲು ಇವರನ್ನು ಸರ್ವಾನುಮತದಿಂದ
ಆರಿಸಲಾಯಿತು. ಯಚ್ ಸೂರ್ಯನಾರಾಯಣ ಸ್ವಾಗತಿಸಿ, ಮೋಹನಚಂದ್ರ ವಂದಿಸಿದರು.

