ಮಂಜೇಶ್ವರ: ಬಂಟರ ಸಂಘ ಮೀಂಜ ಇದರ ಆಶ್ರಯದಲ್ಲಿ ಮೀಯಪದವಿನಲ್ಲಿರುವ ಚೌಟರ ಚಾವಡಿಯಲ್ಲಿ ಬಂಟ ಸಮಾಜದ ವಿಧ್ಯಾರ್ಥಿಗಳಿಗೆ ಕಲಿಕಾ ಸಹಾಯಧನ ವಿತರಣೆ, 2018-2019ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಕೃಷಿಕರಿಗೆ ಸನ್ಮಾನ, ಅಗಲಿದ ಹಿರಿಯ ಚೇತನರಿಗೆ ಸಂಸ್ಮರಣಾ ಸಮಾರಂಭ ಇತ್ತೀಚೆಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೀಂಜ ಬಂಟರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ ಎಲಿಯಾಣ ವಹಿಸಿದರು. ವೇದಿಕೆಯಲ್ಲಿ ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ಮಾಯಿಪ್ಪಾಡಿ ಗುತ್ತು, ನಿವೃತ್ತ ಮುಖ್ಯೋಪಾದ್ಯಾಯ ಎಮ್. ಸುಬ್ಬಣ್ಣ ಶೆಟ್ಟಿ ಬೇಳ, ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಜಾಗತಿಕ ಬಂಟರ ಸಂಘದ ಜೊತೆ ಕಾರ್ಯದರ್ಶಿ ಸಂಕಬೈಲ್ ಸತೀಶ ಅಡಪ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ. ದಾಮೋದರ ಶೆಟ್ಟಿ ಮಜಿಬೈಲು, ಬಂಟರ ಯಾನೆ ನಾಡವರ ಮಾತೃ ಸಂಘದ ಸದಸ್ಯ ಕಾರ್ತಿಕ್ ಶೆಟ್ಟಿ ಮಜಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಶಂಸನೆಗೈದರು. ಈ ವೇಳೆ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ದಿ. ಡಾ. ಡಿ.ಕೆ ಚೌಟ ಹಾಗೂ ಮೀಂಜ ಬಂಟರ ಸಂಘದ ಮಾಜಿ ಅಧ್ಯಕ್ಷ ದಿ. ಯಜಮಾನ ಸುಂದರ ಶೆಟ್ಟಿ ದರ್ಬೆ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.90 ಅಧಿಕ ಅಂಕ ಗಳಿಸಿದ ಪ್ರಣಮ್ ಶೆಟ್ಟಿ ತಲೇಕಳ ಹಾಗೂ ವಂಶಿ ಶೆಟ್ಟಿ ಕೋಣೆಮಾರು ಕುಳೂರು ಇವರಿಗೆ ಮತ್ತು ಪಿಯುಸಿಯಲ್ಲಿ ಶೇ.90 ಅಧಿಕ ಅಂಕಗಳಿಸಿದ ಪ್ರಜ್ಞೇಶ್ ಶೆಟ್ಟಿ ದರ್ಬೆ, ಶ್ರಾವ್ಯ ಶೆಟ್ಟಿ ಕುಳಬೈಲ್, ಪ್ರತಿಮಾ ಶೆಟ್ಟಿ ಎಲಿಯಾಣ, ಆಶಿತಾ ಶೆಟ್ಟಿ ಕೌಡೂರುಬೀಡು ಮತ್ತು ಅಕ್ಷಿತ್ ಎನ್. ಶೆಟ್ಟಿ ಪಳ್ಳತ್ತಡ್ಕ ಇವರಿಗೆ ಪ್ರತಿಭಾ ಪುರಸ್ಕಾರವನ್ನು ಬಂಟರ ಸಂಘ ಮಂಜೇಶ್ವರ ಫಿರ್ಕಾ ಅಧ್ಯಕ್ಷ ಕೆ ದಾಸಣ್ಣ ಆಳ್ವ ಕುಳೂರು ಬೀಡು ಪ್ರಧಾನಗೈದರು.
ಹಿರಿಯ ಕೃಷಿಕ ಬಂಟಪ್ಪ ಶೆಟ್ಟಿ ಎಲಿಯಾಣ, ಭಜನೆ ಮತ್ತು ಕಂಬಳ ಪೋಷಕ ಮಾರಪ್ಪ ಭಂಡಾರಿ ಕೌಡೂರು ಬೀಡು, ಚಿತ್ರನಟ ಯೋಗೀಶ್ ಶೆಟ್ಟಿ ಧರ್ಮೆಮಾರ್ ಇವರನ್ನು ಡಾ. ಡಿ. ಚಂದ್ರಶೇಖರ ಚೌಟ ಸನ್ಮಾನಿಸಿ, ಗೌರವಿಸಿದರು. ಬಂಟರ ಸಂಘ ಮೀಂಜ ಪ್ರಧಾನ ಕಾರ್ಯದರ್ಶಿ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಧರ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕರಿಬೈಲ್ ವಂದಿಸಿದರು.


