ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗ ಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ವಿಷ್ಣು ಸಹಸ್ರನಾಮ ಪಾರಾಯಣ ಸಪ್ತಾಹವು ವಿವಿಧ ಕ್ಷೇತ್ರಗಳಲ್ಲಿ ಬುಧವಾರದಿಂದ ಆರಂಭವಾಗಿದ್ದು, ಜು.24ರಿಂದ ಪ್ರತಿ ಮನೆಯಲ್ಲೂ ಕುಟುಂಬಿಕರಿಂದ ಸಂಜೆ 6.30ರಿಂದ ವಿಷ್ಣು ಸಹಸ್ರನಾಮ ಪಾರಾಯಣ ಮಾಸಾಚರಣೆ ನಡೆಯಲಿದೆ. ಇದೀಗ ಅಡೂರು ಮಹಾಲಿಂಗೇಶ್ವರ ಕ್ಷೇತ್ರ, ಕಲ್ಲೇರಿಮೂಲೆ ಮಹಾವಿಷ್ಣು ಕ್ಷೇತ್ರ, ಬೆಳ್ಳೂರು ಮಹಾವಿಷ್ಣು ಕ್ಷೇತ್ರ, ಮಲ್ಲಾವರ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಪ್ರತೀ ದಿನ ಸಂಜೆ 6.30ರಿಂದ ಹಾಗೂ ನೂಜಿಬೆಟ್ಟು ಮಹಾವಿಷ್ಣು ಕ್ಷೇತ್ರದಲ್ಲಿ ಬೆಳಗ್ಗೆ 11ರಿಂದ ಈ ಪಾರಾಯಣ ಮಾಸಾಚರಣೆ ಆರಂಭವಾಗಿದೆ. ಶಿವಳ್ಳಿ ಬ್ರಾಹ್ಮಣ ಸಮುದಾಯದ ನೂರಾರು ಮಂದಿ ಸದಸ್ಯರು ಈ ಧಾರ್ಮಿಕ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ಶಿವಳ್ಳಿ ಬ್ರಾಹ್ಮಣ ಸಭಾದಿಂದ ಪಾರಾಯಣ ಮಾಸಾಚರಣೆ ಆರಂಭ
0
ಜುಲೈ 19, 2019