ಮಂಜೇಶ್ವರ: ಯಕ್ಷ ಬಳಗ ಹೊಸಂಗಡಿ ಇದರ ಆಶ್ರಯದಲ್ಲಿ ಆಷಾಢ ಮಾಸದ ಪ್ರಸ್ತುತ ಸಾಲಿನ ಯಕ್ಷಗಾನ ತಾಳಮದ್ದಳೆ ಕೂಟದ ಉದ್ಘಾಟನೆ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗುರುವಾರ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಶ್ರೀ ಕ್ಷೇತ್ರದ ಪವಿತ್ರಪಾಣಿ ಸುಬ್ರಹ್ಮಣ್ಯ ಅನಲತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್.ಎನ್. ಕಡಂಬಾರು ನೆರವೇರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕಾಂತ ಮಾಣಿಲತ್ತಾಯ, ವೇದಮೂರ್ತಿ ರಾಮದಾಸ ಆಚಾರ್ಯ ಹಾಗೂ ತಾಳ್ತಜೆ ಶಂಕರ ಭಟ್ ಈ ಸಂದರ್ಭ ಉಪಸ್ಥಿತರಿದ್ದರು.
ಬಳಿಕ ಶ್ರೀ ರಾಮ ಪಟ್ಟಾಭಿಷೇಕ ಎಂಬ ಕಥಾಭಾಗದ ತಾಳಮದ್ದಳೆ ನಡೆಯಿತು. ಭಾಗವತರಾಗಿ ಗಣೇಶ ಭಟ್ ಆನೆಕಲ್ಲು, ಬರೆ ರಾಜ ಭಟ್, ರತ್ನಾಕರ ಆಳ್ವ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ರಾಜರಾಮ ಬಳ್ಳಾಳ್ ಚಿಪ್ಪಾರ್, ಶುಭಶರಣ ಭಟ್ ತಾಳ್ತಜೆ, ರಮೇಶ್ ಶೆಟ್ಟಿ ಕುಂಜತ್ತೂರು, ಅರ್ಥಧಾರಿಗಳಾಗಿ ನಾಗರಾಜ ಪದಕಣ್ಣಾಯ, ರಾಮಕೃಷ್ಣ ಭಟ್ ಕೋಳ್ಯೂರು, ಜಯರಾಮ ಭಟ್ ದೇವಸ್ಯ, ಶಂಕರಾಚಾರ್ಯ ಕೋಳ್ಯೂರು, ಶ್ರೀವತ್ಸ ವರ್ಕಾಡಿ ಭಾಗವಹಿಸಿದರು. ನಾಗರಾಜ ಪದಕಣ್ಣಾಯ ಸ್ವಾಗತಿಸಿ, ಸಂಘಟಕ ಸಂಕಬೈಲು ಸತೀಶ್ ಅಡಪ ವಂದಿಸಿದರು.