ಮಳ್ಳೇರಿಯ: ಇಲ್ಲಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಕ್ಲಬ್, ಕೇರಳ ಅರಣ್ಯ ಇಲಾಖೆ ಮತ್ತು ಹಸಿರು ಕೇರಳ ಮಿಶನ್‍ನ ಸಂಯುಕ್ತಾಶ್ರಯಸದಲ್ಲಿ ಕಾರಡ್ಕ ಸಮೀಪದ ಮುಂಡೋಳ್ ಶ್ರೀ ದುರ್ಗಾಪರಮೇಶ್ವರಿ ದೇಗುಲ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ಶನಿವಾರ ನಡೆಯಿತು.
ಗಂಧ, ಸಾಗುವಾನಿ, ವಿವಿಧ ತರದ ಹೂವಿನ ಗಿಡಗಳನ್ನು ನೆಡಲಾಯಿತು. ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಸದಸ್ಯ ಬಾಲಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪದ್ಮನಾಭನ್, ಮುಖ್ಯ ಶಿಕ್ಷಕ ಅಶೋಕ ಅರಳಿತ್ತಾಯ, ಶಿಕ್ಷಕಿ ಎಂ.ಸಾವಿತ್ರಿ ಟೀಚರ್, ಸ್ಕೌಟ್ ಶಿಕ್ಷಕ ಗುರುವಾಯುರಪ್ಪ ಭಟ್ ಮೊದಲಾದವರು ಉಪಸ್ಥಿತರಿದರು.


