ಬದಿಯಡ್ಕ ಕೇಂದ್ರವಾಗಿರಿಸಿಕೊಂಡು ನಾಡಿನಾಂದ್ಯಂತ ನಮ್ಮ ಭಾಷೆ,ಕಲೆ,ಸಂಸ್ಕøತಿಯ ಚಟುವಟಿಕೆಗಳಿಂದ ಉತ್ತಮ ಹೆಸರು ಪಡೆದಿರುವ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸಭೆಯು ಬದಿಯಡ್ಕದ ನವಜೀವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆಯಿತು.
ಇತ್ತೀಚೆಗೆ ಯಶಸ್ವಿಯಾಗಿ ನಡೆದ ರಂಗಸಿರಿ ಸಂಭ್ರಮ 2019 ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಮಂಡಿಸಲಾಯಿತು. ದಶಮಾನದ ಸಂಭ್ರಮದಲ್ಲಿರುವ ಸಂಸ್ಥೆಯ ಮುಂದಿನ ಚಟುವಟಿಕೆಗಳ ಅನುಕೂಲಕ್ಕಾಗಿ, ನಾಡಿನ ಸಾಂಸ್ಕøತಿಕ ಜೀವಂತಿಕೆಯ ಉಳಿವಿಗಾಗಿ ರಂಗಸಿರಿಗೆ ಸ್ವಂತ ಜಾಗ ಖರೀದಿಸುವ ನಿರ್ಣಯ ಕೈಗೊಳ್ಳಲಾಯಿತು. ಬದಿಯಡ್ಕದಲ್ಲೇ ಇರುವ ಜಾಗವನ್ನೂ ಸಂದರ್ಶಿಸಿ ಅದನ್ನು ಸದಸ್ಯರೆಲ್ಲರ ಒಪ್ಪಿಗೆಯಂತೆ ಆಯ್ಕೆಮಾಡಲಾಯಿತು. ಬೆಳೆಯುತ್ತಿರುವ ರಂಗಸಿರಿಯ ಮುಂದಿನ ಚಟುವಟಿಕೆಗಳಿಗೆ ಸ್ವಂತ ಜಾಗವು ಪೂರಕವಾಗಬಲ್ಲುದೆಂಬ ಅಭಿಪ್ರಾಯ ಮೂಡಿತು.
ಜಾಗ ಖರೀದಿಯ ಮುಂದಿನ ನಡೆಗಾಗಿ ಜುಲೈ 28ರಂದು ಸಭೆಸೇರಲು ತೀರ್ಮಾನಿಸಲಾಯಿತು. ದಶಮಾನೋತ್ಸವವನ್ನು ಸರಳವಾಗಿ ಆಚರಿಸುವುದೆಂದೂ ನಾಡಿನಾದ್ಯಂತ ಈ ವರ್ಷದ ರಂಗಸಿರಿಯ ತಿರುಗಾಟ, ಚಟುವಟಿಕೆಗಳನ್ನು ದಶಮ ಸಂಭ್ರಮದ ಹೆಸರಿನಲ್ಲೇ ಮಾಡುವುದೆಂದು ನಿರ್ಣಯಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ವಹಿಸಿದ್ದರು. ಲೆಕ್ಕಪತ್ರವನ್ನು ಸಂಸ್ಥೆಯ ಕೋಶಾಧಿಕಾರಿ ರಾಜೇಂದ್ರ ವಾಂತಿಚ್ಚಾಲು ಮಂಡಿಸಿದರು. ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬೇ.ಸಿ ಗೋಪಾಲಕೃಷ್ಣ ಭಟ್, ರವಿರಾಜ ಡಿ, ಪ್ರಸಾದ ಮೈರ್ಕಳ, ದಿನೇಶ ಬಿ, ರೇಶ್ಮ ಅಗ್ಗಿತ್ತಾಯ, ಚಂದ್ರಿಕಾ, ಚಂದ್ರಕಲಾ, ಡಾ.ಸ್ನೇಹಾಪ್ರಕಾಶ್, ಉದನೇಶ ಕುಂಬ್ಳೆ, ವಿದ್ಯಾ ಕುಂಟಿಕಾನ, ಅಭಿಜ್ಞಾ ಭಟ್ ಮೊದಲಾದವರು ಸಕ್ರಿಯವಾಗಿ ಪಾಲ್ಗೊಂಡರು.

